ಗಾಳಿಪಟ 2 ಜೋಡಿ ಜೀವಗಳ ಪರಿಚಯ ಮಾಡಿದ ಯೋಗರಾಜ್ ಭಟ್
ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆಗೆ ದಿಗಂತ್, ಪವನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಇವರಿಗೆ ನಾಯಕಿಯರು ಯಾರು ಎಂಬ ಪ್ರಶ್ನೆಗೆ ಹಲವು ಹೆಸರುಗಳು ಬಂದು ಹೋದವು. ಇದೀಗ ಅಧಿಕೃತವಾಗಿ ಭಟ್ಟರು ತಮ್ಮ ಹೀರೋಗಳಿಗೆ ಜೋಡಿ ಯಾರು ಎಂಬುದನ್ನು ಪ್ರಕಟಿಸಿದ್ದಾರೆ. ಗಣೇಶ್ ಜೋಡಿಯಾಗಿ ವೈಭವಿ ಶಾಂಡಿಲ್ಯ, ದಿಗಂತ್ ಗೆ ಸಂಯುಕ್ತ ಮೆನನ್, ಪವನ್ ಗೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅದೂ ಸಂಭಾವ್ಯ ನಾಯಕಿಯರು ಎಂದು ಭಟ್ಟರು ಪಟ್ಟಿ ಕೊಟ್ಟಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ಈ ಪಟ್ಟಿ ಬದಲಾದರೂ ಅಚ್ಚರಿಯಿಲ್ಲ!