ಯೋಗೀಶ್ ಸಿನಿಮಾ ನಿರ್ದೇಶನದತ್ತ ಗುರು ಪ್ರಸಾದ್ ಲೈಫ್ ಸೂಪರ್ ಗುರು !!

ಬುಧವಾರ, 5 ನವೆಂಬರ್ 2014 (12:58 IST)
ಬಿಗ್‌ಬಾಸ್ ನಲ್ಲಿ ಗೆದ್ದೇ ಗೆಲ್ತೀನಿ ಎಂದು ಬಂದ ನಿರ್ದೇಶಕ ಗುರು ಅರ್ಧದಲ್ಲೇ ಹೊರ ಬಂದರು. ಅದಾದ ಬಳಿಕ ಗುರು ಏನ್ ಮಾಡ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರು ಈಗ ಜೀ ಕನ್ನಡ ವಾಹಿನಿಯ ಲೈಫ್ ಸೂಪರ್ ಗುರು ಎನ್ನುವ ರಿಯಾಲಿಟಿ ಷೋ ಭಾಗವಾಗಿದ್ದಾರೆ. 

ಅದರಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಸಹಿತ ಲೂಸ್ ಮಾದ ಯೋಗೀಶ್ ಅವರ ಚಿತ್ರ ಮತ್ತು ಅಕುಲ್ ಬಾಲಾಜಿ ನಟನೆಯ ಚಿತ್ರವನ್ನು ನಿರ್ದೇಶಿಸಲುಸಿದ್ಧತೆ ನಡಿಸಿದ್ದಾರೆ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಮೂಲಕ ಭಿನ್ನರೀತಿಯ ವಾತಾವರಣವನ್ನು ಚಿತ್ರರಂಗದಲ್ಲಿ ಸೃಷ್ಟಿ ಮಾಡಿದ ಗುರು ಈಗ ರಿಯಾಲಿಟಿ ಶೋನಲ್ಲೂ ಸಹಿತ ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದಾರೆ.
 
ಅಲ್ಲದೆ ಈ ಮೊದಲು ಯೋಗಿ ಈಟೀವಿ ಕನ್ನಡ ವಾಹಿಯಲ್ಲಿ ಪ್ರಸಾರವಾದ ತಕಧಿಮಿತಾ ಎನ್ನುವ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು ಅವರಿಬ್ಬರ ಜೋಡಿಯ ಚಿತ್ರ ಸೆಟ್ಟೇರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅದು ಸಾಧ್ಯ ಆಗಿರಲಿಲ್ಲ. ಈಗ ಮತ್ತೆ ಒಂದಾಗಿದ್ದಾರೆ ಗುರು ಹಾಗೂ ಯೋಗಿ. ಸಿನಿಮಾ ಮೂಲಕ ಮಾತ್ರವಲ್ಲ ಲೈಫ್ ಸೂಪರ್ ಗುರು ರಿಯಾಲಿಟಿ ಶೋ ಮುಖಾಂತರವೂ ಸಹ! ಧನಂಜಯ್ ಅವರು ನಟಿಸಿರುವ ಚಿತ್ರವನ್ನು ನಿರ್ದೇಶನ ಮಾಡ ಬೇಕಿತ್ತು ಗುರು ಆದರೆ ಧನಂಜಯ್ ಗೆ ಈಗ ಬಿಡುವಿಲ್ಲದಷ್ಟು ಚಿತ್ರಗಳು. ಆದಕಾರಣ ಗುರು ಈಗ ಯೋಗಿ ಕಡೆ ಚಿತ್ತ ನೆಟ್ಟಿದ್ದಾರೆ. ಯೋಗಿ ಮತ್ತು ಗುರು ಅವರ ಇಷ್ಟದ ನಟನಂತೆ ಅವರ ಚಿತ್ರವನ್ನು ನಿರ್ದೇಶಿಸುವುದು ತಮಗೆ ಖುಷಿಯ ಕೆಲಸ ಎಂದು ಹೇಳಿದ್ದಾರೆ ಗುರು. 

ವೆಬ್ದುನಿಯಾವನ್ನು ಓದಿ