ಹಳೇ ನೋಟು ಕೊಟ್ಟು ನಟರಾಜ ಸರ್ವಿಸ್ ಚಿತ್ರ ನೋಡಬಹುದು!

ಮಂಗಳವಾರ, 15 ನವೆಂಬರ್ 2016 (11:33 IST)
ಬೆಂಗಳೂರು: ದೇಶದೆಲ್ಲೆಡೆ ಹಳೆ ನೋಟು ಬದಲಾಯಿಸಿ ಹೊಸ ನೋಟು ಪಡೆದುಕೊಳ್ಳುವ ಧಾವಂತದಲ್ಲಿ ಜನರಿದ್ದಾರೆ. ಹೀಗಿರುವಾಗ  ಸಿನಿಮಾ ನೋಡುವ ಜನ ಕಡಿಮೆಯಾಗಿದ್ದಾರೆ. ಹಾಗಾಗಿ ನಟರಾಜ ಸರ್ವಿಸ್ ಸಿನಿಮಾ ತಂಡದವರು ಹೊಸದೊಂದು ಐಡಿಯಾ ಮಾಡಿದ್ದಾರೆ. ಹಳೇ 500, 1000 ನೋಟು ಕೊಟ್ಟರೂ ನಟರಾಜ ಸಿನಿಮಾ ಟಿಕೆಟ್ ಪಡೆಯಬಹುದು ಎಂದು ಚಿತ್ರ ತಂಡ ಹೇಳಿದೆ.

ಇದು ಹೊಸ ನೋಟಿಲ್ಲದೆ, ಹಳೇ ನೋಟು ಕೊಟ್ಟು ಸಿನಿಮಾ ನೋಡಲಾಗದೇ ಕಷ್ಟಪಡುವವರಿಗಾಗಿ ನಿರ್ಮಾಪಕರು ಮಾಡಿದ ಯೋಜನೆ. ಆದರೆ ಇದು ನವಂಬರ್ 30 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ನವಂಬರ್ 17 ರಂದು ಚಿತ್ರ ಬಿಡುಗಡೆಯಾಗಲಿದೆ.

ಕಳೆದ ವಾರ ಬಿಡುಗಡೆಯಾದ ಕೆಲವು ಚಿತ್ರಗಳು ನೋಟಿನ ಗಲಾಟೆಯಲ್ಲಿ ಕಡಿಮೆ ಕಲೆಕ್ಷನ್ ಮಾಡಿದ್ದಕ್ಕೆ ನಿರ್ಮಾಪಕರು ಇಂತಹದ್ದೊಂದು ಭರ್ಜರಿ ಐಡಿಯಾ ಮಾಡಿದ್ದಾರೆ. ಇದರಿಂದ ಚಿತ್ರಕ್ಕೆ ಇನ್ನಷ್ಟು ಜನ ವೀಕ್ಷಕರು ಬಂದೇ ಬರುತ್ತಾರೆ ಎಂಬುದು ಚಿತ್ರ ತಂಡದ ಲೆಕ್ಕಾಚಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ