ಅಮೃತಾ ಬಳಿಕ ಶಾಹಿದ್ ಕಪೂರ್ ಬದುಕಲ್ಲಿ ಬಂದಾಕೆ ಕರೀನಾ ಕಪೂರ್. ಇವರಿಬ್ಬರು ಇನ್ನೇನು ಮದುವೆಯಾಗ್ತಾರೆ ಅನ್ನುವಷ್ಟರ ಮಟ್ಟಿಗೆ ಸುದ್ದಿಯಾಗಿತ್ತು. ಇನ್ನು ಬೆಬೋ ಹಾಗೂ ಶಾಹಿದ್ ಕೂಡ ಹಾಗೇ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು. ಆದ್ರೆ ಜಬ್ ವಿ ಮೆಟ್ ಸಿನಿಮಾದಲ್ಲಿ ಬಳಿಕ ಇಬ್ಬರೂ ದೂರವಾದರು. ಆ ಬಳಿಕ ಕೆಲ ದಿನಗಳ ಕಾಲ ಶಾಹಿದ್ ಕಪೂರ್ ಹೆಸ್ರು ವಿದ್ಯಾ ಬಾಲನ್ ಜೊತೆ ಥಳುಕು ಹಾಕಿಕೊಂಡಿತ್ತು. ಬಳಿಕ ಆ ಸುದ್ದಿ ಹಾಗೇ ಸೈಲೆಂಟ್ ಆಯಿತು.
ಇನ್ನು ಪ್ರಿಯಾಂಕಾ ಚೋಪ್ರಾ ಹಾಗೂ ಶಾಹಿದ್ ನಡುವೆಯೂ ಏನೋ ಇದೆ ಅನ್ನೋ ಸುದ್ದಿ ಗುಲ್ಲೆದಿತ್ತು. ಈ ಮಧ್ಯೆಯೇ ಕಮೀನೇ ಹಾಗೂ ತೇರಿ ಮೇರಿ ಕಹಾನಿ ಚಿತ್ರದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ರು. ಆದ್ರೆ ಬಳಿಕ ಸುದ್ದಿಗೆ ತೆರೆ ಬಿತ್ತು. ಅದೇನೇ ಇರಲಿ ಆದ್ರೀಗ ಶಾಹಿದ್ ಮನೆಯವರ ಇಚ್ಛೆಯಂತೆ ಮೀರಾ ಕೈ ಹಿಡಿಯುತ್ತಿದ್ದಾರೆ. ಈ ಬಗ್ಗೆ ಶಾಹಿದ್ ಹಾಗೂ ಮೀರಾ ಇಬ್ಬರಿಗೂ ಖುಷಿ ಇದೆಯಂತೆ.