ಚಾರ್ಮಿ ಐಟಂ ಹಾಡಿಗೆ ಆಗಿರುವ ಖರ್ಚು ಎಷ್ಟು ಗೊತ್ತೇ..?!

ಶುಕ್ರವಾರ, 6 ಮಾರ್ಚ್ 2015 (10:08 IST)
ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಅಂದರೆ ದಕ್ಷಿಣದ ಸಿನಿಮಾ ರಂಗದ ಕಡೆಗೆ ಬಂದ ನಟಿ ಚಾರ್ಮಿ. ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚಿನ ಅವಕಾಶ ಪಡೆದ ಈಕೆ ಈಗ ಅತ್ಯಂತ ಬೇಡಿಕೆಯ ಐಟಂ ನಂಬರ್ ಮಾಡುವ ತಾರೆಯಾಗಿ ಬದಲಾಗಿದ್ದಾಳೆ. ಆರಂಭದಲ್ಲಿ ಆಕೆ ಹೀರೋಯಿನ್ ಆದರೂ ಸಹಿತ ಆ ಬಳಿಕ ಐಟಂ ಹಾಡುಗಳಲ್ಲಿ ನಟಿಸಲು ಸಮ್ಮತಿಸಿದ ಬಳಿಕ ಈಗ ಆಕೆಗೆ ವಿಪುಲ ಅವಕಾಶಗಳು. ಎಸ್ಕೊ ನಾ ಗುಮ ಗುಮಾ ಛಾಯ ಎನ್ನುವ ಹಾಡಿನ ಮೂಲಕ ಪಡ್ಡೆ ಹೈಕಳುಗಳ ಹಾರ್ಟ್ ಬೀಟ್ ಹೆಚ್ಚಿಸಿದ್ದ ಈ ತಾರೆ, ಈಗ ಐಟಂ ಡ್ಯಾನ್ಸ್‌ಗಳ ಅವಕಾಶ ಪಡೆದಿದ್ದಾಳೆ.   
ಈಗ ಆಕೆ ವಿಕ್ರಮ್ ಅವರ ಚಿತ್ರದಲ್ಲಿ   ಡ್ಯಾನ್ಸ್ ಮಾಡಲು ಸಮ್ಮತಿ ಮುದ್ರೆ ನೀಡಿದ್ದಾಳೆ. ವಿಕ್ರಮ್ ಅವರು ಹೀರೋ ಆಗಿರುವ ಪತ್ತು ಎಂದ್ರಟ್ಟುಕುಳ್ ಸಿನಿಮಾದಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾಳೆ. ಈ ಚಿತ್ರವನ್ನು ಗೋಲಿಸೋಡಾ  ದಂತದ ಕಡಿಮೆ ಬಜೆಟ್ಟಿನ ಚಿತ್ರಕ್ಕೆ ಭಾರಿ ಯಶಸ್ಸು ತಂದು ಕೊಟ್ಟ ವಿಜಯ್ ಮಿಲ್ಟನ್ ಅವರು  ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.
 
ಈ ಚಿತ್ರದ ವಿಶೇಷವೆಂದರೆ ಚಾರ್ಮಿ ಅಭಿನಯಿಸಿರುವ ಹಾಡಿಗೆಂದು ಮಾಡಿರುವ ಖರ್ಚು  ಮೂರು ಕೋಟಿ ರೂಪಾಯಿಗಳು ಎಂದು ಬಾಲಿವುಡ್ ಮೂಲಗಳಿಂದ ತಿಳಿದು ಬಂದಿದೆ . ಒಂದು ಕೋಟಿಗಿಂತ ಕಡಿಮೆ ಮೊತ್ತದಲ್ಲಿ ಗೋಲಿಸೋಡಾ ಚಿತ್ರ ತಯಾರಿಸಿದ್ದ ವಿಜಯ್ ತನ್ನ ಮುಂದಿನ ಚಿತ್ರದಲ್ಲಿ  ಒಂದು ಹಾಡಿಗೆ ಈ ಪರಿಯ ಮೊತ್ತವನ್ನು ಖರ್ಚು ಮಾಡಿಸಿರುವುದು ಈಗ ಕಾಲಿವುಡ್ ನಲ್ಲಿರುವ ಎಲ್ಲರ  ಚರ್ಚೆಯ ಸಂಗತಿಯಾಗಿದೆ. ಆದರೆ, ಈ ಚಿತ್ರ ವಿಕ್ರಮ್ ಅಭಿನಯದ್ದು ಆಗಿರುವುದರಿಂದ ಇಷ್ಟು ಖರ್ಚು ಆಗಲೇ ಬೇಕು ಎನ್ನುವ ಮಾತನ್ನು ಚಿತ್ರ ತಂಡ ಹೇಳಿವೆ. ಈ ಮೂಲಕ ಚಾರ್ಮಿ ಮತ್ತೆ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾಳೆ. ಇದು ಆಕೆಗೆ ಹೆಚ್ಚಿನ ಅವಕಾಶಗಳನ್ನು ನೀಡಬಹುದು ಎನ್ನುತ್ತಿದ್ದಾರೆ ಸಿನಿಮಾದವರು.

ವೆಬ್ದುನಿಯಾವನ್ನು ಓದಿ