ಚೆನ್ನೈ : ನಟನಾಗಿ, ನಿರ್ಮಾಪಕನಾಗಿ ವಿಶಾಲ್ ಅವರು ಕಾಲಿವುಡ್ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ಇತ್ತೀಚೆಗೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.
ನಟ ವಿಶಾಲ್ ಅವರು 2019ರಲ್ಲಿ ಅನಿಷಾ ಅಲ್ಲಾ ರೆಡ್ಡಿ ಅವರೊಂದಿಗೆ ಮದುವೆಯಾಗಲು ಸಿದ್ಧರಾಗಿದ್ದರು. ಆದರೆ ಈ ಮದುವೆ ನಿಂತುಹೋಗಿದೆ. ಬಳಿಕ ಅಭಿಮನ್ಯುಡು ತಾರೆ ವರಲಕ್ಷ್ಮಿ ಜೊತೆ ಸಂಬಂಧ ಹೊಂದಿದ್ದಾರೆಂದು ವದಂತಿ ಕೇಳಿಬಂದಿತ್ತು. ಈ ವದಂತಿಯನ್ನು ಅವರು ನಿರಾಕರಿಸಿದ್ದಾರೆ.
ಆದರೆ ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆ ವಿಚಾರ ಮಾತನಾಡಿದ ಅವರು, ತಾನು ಒಬ್ಬಂಟಿಯಾಗಿಯೇ ಇರುವುದಾಗಿ, ಯಾರೊಂದಿಗೂ ಬೆರೆಯಲು ಸಿದ್ದರಿಲ್ಲ ಎಂಬುದಾಗಿ ತಿಳಿಸಿದ್ದಾರೆ.