ಇಂದಿರಾಗಾಂಧಿ ಪಾತ್ರಕ್ಕೆ ವಿದ್ಯಾಬಾಲನ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ ?

ಮಂಗಳವಾರ, 30 ಜೂನ್ 2015 (10:17 IST)
ಮನೀಶ್ ಗುಪ್ತ ಅವರ ನಿರ್ದೇಶನದ ಚಿತ್ರದಲ್ಲಿ ನಟಿ ವಿದ್ಯಾ ಬಾಲನ್ ಅವರು ನಟಿಸುವ ಬಗ್ಗೆ ಸಮ್ಮತಿ ತೋರಿದ್ದಾರೆ ಎಂದು ಈ ಮೊದಲು ನಾವು ಹೇಳಿದ್ದೆವು. ಭಾರತವನ್ನು ಆಳಿದ್ದ ಹಿರಿಯ ರಾಜಕಾರಣಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಜೀವನ ಚರಿತ್ರೆಗೆ  ವಿದ್ಯಾಬಾಲನ್ ಸೂಕ್ತ  ಎಂದು ಆಯ್ಕೆ ಮಾಡಿ ಆಕೆಯನ್ನು ಸಂಪರ್ಕಿಸಿದ್ದರು ಮನೀಶ್.ಅವರ ಹೇಳಿದ ಕಥೆಯು ವಿದ್ಯಾಬಾಲನ್ ಅವರಿಗೆ ಇಷ್ಟ ಆಗಿತ್ತು. ಈಗ ಆಕೆ ಆ ಸಿನಿಮಾದಲ್ಲಿ ನಟಿಸಲು ಹಸಿರು ನಿಶಾನೆ ನೀಡಿದ್ದಾರಂತೆ. ಹಾಗಂತ ಸುದ್ದಿ ಹೊರ ಬಂದಿದೆ. 
ಇಂದಿರಾಗಾಂಧಿ ಅವರ ಪಾತ್ರವಾದ ಕಾರಣ ಅನೇಕಾನೇಕ  ವಿವಾದಗಳು, ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೇರಳವಾಗಿದ್ದು, ಅದರಲ್ಲಿ ನಟಿಸಲು ಅಷ್ಟೊಂದು ಆಸಕ್ತಿ ತೋರದೆ ಇದ್ದರೂ ಸಹಿತ ಆ ಚಿತ್ರದ ಕಥೆ ವಿದ್ಯಾ ಅವರನ್ನು ಸೆಳೆದ ಕಾರಣ ಒಪ್ಪಿಗೆ ನೀಡಿದ್ದಾರಂತೆ. ಮುಖ್ಯವಾಗಿ ಆ ಪಾತ್ರಕ್ಕೆ ಬೇರೆ ಕಲಾವಿದೆಯರಿಗಿಂತ ವಿದ್ಯಾ ಹೆಚ್ಚು ಸೂಕ್ತ ಎನ್ನುವ ಉದ್ದೇಶವನ್ನು ನಿರ್ಮಾಪಕ ನಿರ್ದೇಶಕರು ಹೊಂದಿದ್ದರು ಅದನ್ನು ತನ್ನ ಉಪಯೋಗಕ್ಕೆ ಬಳಕೆ ಮಾಡಿಕೊಂಡ ವಿದ್ಯಾ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 18  ಕೋಟಿ ರೂಗಳಂತೆ. ಈಗ ಬಿ ಟೌನ್ ನಲ್ಲಿ ಆಕೆಯ ರೆಮ್ಯುನರೇಶನ್ ಅಂಶ ಹೆಚ್ಚು ಸುದ್ದಿ ಮಾಡುತ್ತಿದೆ. 

ವೆಬ್ದುನಿಯಾವನ್ನು ಓದಿ