ಯುವರತ್ನ ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಹ್ವಾನವಿತ್ತ ಸಂತೋಷ್ ಆನಂದ್ ರಾಮ್

ಸೋಮವಾರ, 7 ಅಕ್ಟೋಬರ್ 2019 (08:42 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ಬಿಡುಗಡೆ ಇಂದು ನಡೆಯಲಿದ್ದು, ಚಿತ್ರತಂಡ ಅಭಿಮಾನಿಗಳ ಸಮ್ಮುಖದಲ್ಲೇ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ.


ಇಂದು ಸಂಜೆ 5.30 ಕ್ಕೆ ಸಂತೋಷ್ ಥಿಯೇಟರ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್ ಲಾಂಚ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ ಪುನೀತ್ ತಮ್ಮ ಅಭಿಮಾನಿಗಳಿಗೆ ಆಹ್ವಾನವಿತ್ತಿದ್ದಾರೆ.

ಈಗ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡಾ ಆಹ್ವಾನವಿತ್ತಿದ್ದು, ಪುನೀತ್ ಅಭಿಮಾನಿಗಳಿಗೆಲ್ಲಾ ಬಂದು ಹರಸಬೇಕು ಎಂದು ವಿಡಿಯೋ ಸಂದೇಶ ಮೂಲಕ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ