ಯುವರತ್ನ ಟೀಸರ್ ಮೈಸೂರು ದಸರಾಗೆ ಗಿಫ್ಟ್

ಶುಕ್ರವಾರ, 20 ಸೆಪ್ಟಂಬರ್ 2019 (08:54 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಟೀಸರ್ ಯಾವಾಗ ಬಿಡುಗಡೆಯಾಗುತ್ತದೆಂದು ಕಾಯುತ್ತಿದ್ದ  ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.


ಪುನೀತ್ ಈ ಟೀಸರ್ ಗೆ ತಾವೇ ಧ್ವನಿ ನೀಡಿದ್ದಾರೆ. ಇತ್ತೀಚೆಗಷ್ಟೇ ಅದರ ರೆಕಾರ್ಡಿಂಗ್ ಮುಗಿಸಿದ್ದಾರೆ. ಹಾಗೂ ಸದ್ಯದಲ್ಲೇ ಟೀಸರ್ ಬಿಡುಗಡೆಯಾಗುತ್ತಿರುವುದಾಗಿ ಹೇಳಿದ್ದರು.

ಈಗ ಯುವರತ್ನ ತಂಡ ಟೀಸರ್ ಬಿಡುಗಡೆಗೆ ದಸರಾಗೆ ಎಂದು ಘೋಷಿಸಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಹೀಗಾಗಿ ಮೈಸೂರು ದಸರಾಕ್ಕೆ ಯುವರತ್ನ ಟೀಸರ್ ಗಿಫ್ಟ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ