ಪುನೀತ್ ರಾಜ್ ಕುಮಾರ್ ರನ್ನು ಇಂಪ್ರೆಸ್ ಮಾಡಿದ ಜೀ ಸರಿಗಮಪ ಸ್ಪರ್ಧಿ ರುಬೀನಾ

ಗುರುವಾರ, 28 ಮಾರ್ಚ್ 2019 (09:05 IST)
ಬೆಂಗಳೂರು: ಸ್ಕೂಲ್ ಯೂನಿಫಾರ್ಮ್ ತೊಟ್ಟುಕೊಂಡು ಜೀ ಕನ್ನಡ ಸರಿಗಮಪ ಲಿಟಲ್ ಚಾಂಪಿಯನ್ಸ್ ಶೋನಲ್ಲಿ ಹಾಡುವ ಸ್ಪರ್ಧಿ ರುಬೀನಾ ಎಂಬಾಕೆ ಬಗ್ಗೆ ಎಲ್ಲರಿಗೂ ಗೊತ್ತಿರಲೇಬೇಕು.


ಈ ಹುಡುಗಿ ಇತ್ತೀಚೆಗೆ ಸರಿಗಮಪ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾದ ‘ಬೊಂಬೆ ಹೇಳುತೈತೆ’ ಹಾಡಿನ ದಾಟಿಯಲ್ಲಿ ತಮ್ಮ ಶಾಲೆಯ ಬಗ್ಗೆ ಹಾಡಿದ್ದು ವೈರಲ್ ಆಗಿತ್ತು. ಆಕೆಯ ಹಾಡು ಕೇಳಿ ಈ ಹಾಡನ್ನು ಪವರ್ ಸ್ಟಾರ್ ಗೆ ಕೇಳಿಸಬೇಕು ಎಂದು ತೀರ್ಪುಗಾರರಾದ ವಿಜಯ್ ಪ್ರಕಾಶ್ ಹೇಳಿದ್ದರು.

ಆ ಕೆಲಸವನ್ನು ಇದೀಗ ಜೀ ಕನ್ನಡ ಮಾಡಿದೆ. ರುಬೀನಾ ಜತೆಯಲ್ಲಿ ಕುಳಿತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಕೆ ಹಾಡಿದ ಹಾಡನ್ನು ಕೇಳಿದ್ದಾರೆ. ರುಬೀನಾ ಹಾಡು ಕೇಳಿ ತಮ್ಮ ಸಿನಿಮಾದ ಹಾಡೊಂದು ಈ ಮಟ್ಟಿಗೆ ಪ್ರೇರಣೆಯಾಗಿದ್ದು ನೋಡಿ ಸ್ವತಃ ಪುನೀತ್ ಖುಷಿಯಾಗಿದ್ದಾರೆ. ಜತೆಗೆ ಹಾಡು ಹಾಡಿದ ರುಬೀನಾರನ್ನು ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ