ಪುನೀತ್ ಗೆ ಸಕತ್ ಅನುಭವ ಕೊಟ್ಟ ನಿನ್ನಿಂದಲೇ

ಭಾನುವಾರ, 15 ಡಿಸೆಂಬರ್ 2013 (13:01 IST)
PR
PR
ಪುನೀತ್ ರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ ನಿನ್ನಿಂದಲೇ. ಅದು ಈಗ ತನ್ನ ಚಿತ್ರೀಕರಣವನ್ನು ಯುಎಸ್ ಮತ್ತು ಥೈಲ್ಯಾಂಡ್ ದೇಶಗಳಲ್ಲಿ ಪೂರ್ಣ ಗೊಳಿಸಿದೆ. ಈ ಚಿತ್ರದಲ್ಲಿ ಅನೇಕ ಹೊಸ ಸಾಹಸಗಳನ್ನು ಪುನೀತ್ ರಾಜ್ ಕುಮಾರ್ ಮಾಡಿದ್ದಾರೆ. ನ್ಯೂಯಾರ್ಕ್ ಮತ್ತು ಥೈಲ್ಯಾಂಡ್ ನಲ್ಲಿ ಹೊಸ ಜಾಗಗಲ್ಲಿ ಚಿತ್ರವನ್ನು ಶೂಟ್ ಮಾಡಲಾಗಿದೆಯಂತೆ . ಈ ವರೆಗೂ ಆ ಲೋಕೇಶನ್ ಗಳಲ್ಲಿ ಯಾರೂ ಶೂಟಿಂಗ್ ಮಾಡಿಲ್ಲವಂತೆ. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ಆಗಿದ್ದಾರೆ ಎರಿಕ ಫರ್ನಾಂಡೀಸ್.

ಈ ಚಿತ್ರದ ಚಿತ್ರೀಕರಣ ತಮಗೆ ಹೊಸ ಅನುಭವ ನೀಡಿದೆ ಎಂದು ನಟ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ. ಇದರಲ್ಲಿ ಗುಡ್ಡದ ಮೇಲಿನಿಂದ ಜಿಗಿತ, ಆಕಾಶದಲ್ಲಿ ಹಾರಾಟದ ಅನುಭವ ಅತ್ಯದ್ಭುತವಾಗಿತ್ತು ಎಂದಿದ್ದಾರೆ. ಇವುಗಳನ್ನು ನ್ಯೂ ಜರ್ಸಿಯಲ್ಲಿರುವ ಸ್ಕೈ ರಾನ್ಚ್ ಮತ್ತು ಗ್ರಾವಿಟಿ ವಾಲ್ಟ್ ನಲ್ಲಿ ಶೂಟಿಂಗ್ ಮಾಡಲಾಯಿತಂತೆ . ಮೊತ್ತ ಮೊದಲ ಬಾರಿ ತಮ್ಮ ಸಿನಿಮಾ ಅಮೇರಿಕ ದೇಶದಲ್ಲಿ ಶೂಟಿಂಗ್ ಆಗಿರುವುದು ಎನ್ನುವ ಖುಷಿಯನ್ನು ಹಂಚಿಕೊಂಡಿದ್ದಾರೆ ಪವರ್ ಸ್ಟಾರ್.

ವೆಬ್ದುನಿಯಾವನ್ನು ಓದಿ