ಹೊಸ ವರ್ಷದಲ್ಲಿ ಮಿನುಗಲಿದ್ದಾರೆ ಸುನಿಲ್, ಪೂಜಾ ಗಾಂಧಿ

MOKSHA
ಚಿತ್ರ: ಮಿನುಗು
ತಾರಾಗಣ: ಸುನೀಲ್ ರಾವ್, ಪೂಜಾ ಗಾಂಧಿ, ಅಜಿತ್ ಹಂಡೆ ಮತ್ತಿತರರು
ನಿರ್ದೇಶನ: ಎ. ಜಯವಂತ್

ನೂತನ ವರ್ಷದ ಪ್ರಪ್ರಥಮ ದಿನವೇ ಹೊಸತನಗಳನ್ನು ಮೈಗೂಡಿಸಿಕೊಂಡು ಬಿಡುಗಡೆಯಾಗುತ್ತಿದೆ `ಮಿನುಗು' ಚಿತ್ರ. ನಟಿ ಪೂಜಾ ಗಾಂಧಿ ಈ ಚಿತ್ರದ ಮಿನುಗು ತಾರೆ.

ಪೂಜಾ ಪ್ರಕಾರ ಇದೊಂದು ಪ್ರೇಮ ಕತೆಯಂತೆ. `ಮಿನುಗು' ಚಿತ್ರದಲ್ಲಿ ಸೊಗಸಾಗಿ ನಟಿಸಿರುವುದಾಗಿ ಹೇಳಿಕೊಳ್ಳುತ್ತಾರೆ ಅವರು. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಖುಷಿ ಕೊಡುವ ಚಿತ್ರ ಎನ್ನುತ್ತದೆ ಚಿತ್ರತಂಡ. ಸುಮಾರು ಎರಡೂವರೆ ವರ್ಷಗಳ ನಂತರ ನಟ ಸುನೀಲ್ ರಾವ್ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಸುನೀಲ್ ಅವರಿಗೆ ಬ್ರೇಕ್ ನೀಡುತ್ತಾ ಅನ್ನೌದನ್ನು ಕಾದು ನೋಡಬೇಕಿದೆ.

ಮಿನುಗು ಚಿತ್ರಕ್ಕೆ ಕತೆ ರಚಿಸಿ, ನಿರ್ದೇಶನವನ್ನು ಮಾಡಿದವರು ಎ. ಜಯವಂತ್. ಅವರ ಪ್ರಕಾರ ಇದು ಕ್ಲಾಸ್, ಮಾಸ್, ಕಮರ್ಷಿಯಲ್, ಆರ್ಟ್ ಚಿತ್ರವಂತೆ. ಚಿತ್ರದ ನಿರ್ಮಾಕರು ಗಜೇಂದ್ರ ಜಿ, ಸಂಗೀತ ನಿರ್ದೇಶಕರು ಗೋಪು-ರಾಜೇಶ್ ರಾಮನಾಥ್, ಸತೀಶ್ ಕುಮಾರ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ