ಸೂಪರ್ ಸ್ಟಾರ್ ಗಳನ್ನೂ ಹಿಂದಿಕ್ಕಿದ ಶ್ರೀದೇವಿ ...ಈಗ ಹೀರೋಯಿನ್ ಗಳ ಕಾಲ !

ಮಂಗಳವಾರ, 5 ಆಗಸ್ಟ್ 2014 (10:06 IST)
ಸಾಮಾನ್ಯವಾಗಿ ಕೆಲವು ಸ್ಟಾರ್ ನಟರ ಚಿತ್ರಗಳು ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಸಹಿತ ಹೆಚ್ಚು ಜನಪ್ರಿಯತೆ ಪಡೆದಿರುತ್ತದೆ. ರಜನಿಕಾಂತ್ ಈ ಸಾಲಿಗೆ ಸೇರುತ್ತಾರೆ. ಈಗ ಆಮೀರ್ ಖಾನ್ ಸಹ ಆ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ಇವರಿಬ್ಬರ  ನಡುವೆ ನಟಿ ಶ್ರೀದೇವಿ ಸಹಿತ ಚಾನ್ಸ್ ಪಡೆದಿದ್ದಾರೆ. 
 
ರಜನಿಕಾಂತ್ ಯಾವುದೇ ಚಿತ್ರ ಬಂದರು ಅದು ಜಪಾನ್ ಭಾಷೆಗೆ ಡಬ್ ಆಗುತ್ತದೆ. ಅದು ಅಂದಿನಿಂದ ನಡೆದು ಬಂದ ಪರಂಪರೆ. ಅದೇರೀತಿ ಈಗ ಆಮೀರ್ ಖಾನ್ ಅವರ 3 ಇಡಿಯಟ್ಸ್  ಅತಿ ಹೆಚ್ಚಿನ ಜನಪ್ರಿಯತೆ ಪಡೆದ ಚಿತ್ರವಾಗಿದೆ.  ಶ್ರೀದೇವಿ ಅವರು ನಟಿಸಿರುವ ಇಂಗ್ಲೀಷ್ ವಿಂಗ್ಲೀಷ್  ಚಿತ್ರಕ್ಕೂ ಸಹಿತ ಅಷ್ಟೇ ಮನ್ನಣೆ ಸಿಕ್ಕಿದೆಯಂತೆ.ಆ ಚಿತ್ರವನ್ನು ಹೆಚ್ಚಾಗಿ ಜಪಾನ್ ಮಹಿಳೆಯರು ವೀಕ್ಷಿಸುತ್ತಿದ್ದಾರಂತೆ. 
 
.........ಇನ್ನು ಇದೆ. ಮುಂದೆ ಓದಿ 
 
ಮುಖ್ಯವಾಗಿ ಆ  ಚಿತ್ರದ ಥೀಮ್ ಆ ಹೆಣ್ಣುಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆಯಂತೆ. ಎಲ್ಲರಿಗೂ ಗೊತ್ತಿರುವಂತೆ ಶ್ರೀದೇವಿ ಇಂಗ್ಲೀಷ್ ಬರದ ಗೃಹಿಣಿ ಪಾತ್ರ ಮಾಡಿದ್ದಾರೆ ಅದರಲ್ಲಿ. ಆ ರೀತಿಯ ಸಮಸ್ಯೆಯನ್ನು ಜಪಾನ್ ಹೆಣ್ಣುಮಕ್ಕಳು ಸಹ ಎದುರಿಸುತ್ತಿದ್ದಾರೆ. ಜೂನ್ ತಿಂಗಳು 23  ರಂದು  ಈ ಚಿತ್ರವು  33 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. 
 
4,20,000 ಡಾಲರ್ಗಳಷ್ಟು  (ಭಾರತೀಯ ಕರೆನ್ಸಿಯಲ್ಲಿ  ರೂ .2.5 ಕೋಟಿಗಳು )  ಹಣ ಗಳಿಕೆ ಮಾಡಿದೆಯಂತೆ ಈ ಚಿತ್ರ. ಆಮೀರ್ ಖಾನ್ ಅವರ 3ಇಡಿಯೆಟ್ಸ್ ಬಳಿಕ ಅತಿ ಹೆಚ್ಚು ಗಳಿಕೆಯನ್ನು ಮಾಡಿದ ಚಿತ್ರ ಇಂಗ್ಲೀಷ್ ವಿಂಗ್ಲೀಷ್ ಆಗಿದೆ.ಈ ಮುಖಾಂತರ ಶ್ರೀದೇವಿ ಸೂಪರ್ ಸ್ಟಾರ್ಗಳ ಜೊತೆ ಸ್ಪರ್ಧೆಗೆ ನಿಂತ ಸೂಪರ್ ಸ್ಟಾರಿಣಿ ಆಗಿದ್ದಾರೆ.
 

ವೆಬ್ದುನಿಯಾವನ್ನು ಓದಿ