ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಇನ್ನೆರಡು ತಿಂಗಳೊಳಗೆ ಬಿಡುಗಡೆ

ಶನಿವಾರ, 1 ಜುಲೈ 2023 (18:05 IST)
Photo Courtesy: Twitter
ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಕ್ಕೂ ಮುಂಚೆಯೇ ಟೋಬಿ ಸಿನಿಮಾ ಏಕೆ ಬಿಡುಗಡೆ ಆಗುತ್ತಿದೆ ಅನ್ನುವುದನ್ನ ರಾಜ್ ಬಿ ಶೆಟ್ಟಿ, ವಿವರಿಸಿದ್ದಾರೆ, ರಾಜ್ ಬಿ ಶೆಟ್ಟಿ  ನಟನೆಯ ಟೋಬಿ  ಇನ್ನೆರಡು ತಿಂಗಳೊಳಗೆ ಬಿಡುಗಡೆ ಆಗಲಿದೆ.ನೆನ್ನೆ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಆದರೆ ಟೋಬಿಗಿಂತಲೂ ಮೊದಲು ರಾಜ್ ಬಿ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಏಕೆಂದರೆ ಟೋಬಿಗೂ ಮೊದಲು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಶುರುವಾಗಿ ಮುಗಿದಿತ್ತು, ಆದರೂ ಸಹ  ಟೋಬಿ ಸಿನಿಮಾ ಮೊದಲು ಬಿಡುಗಡೆ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ