ಬೆಂಗಳೂರು: ಸದಾ ವಿಭಿನ್ನ ಚಿತ್ರಗಳನ್ನು ನೀಡುವ ರಕ್ಷಿತ್ ಶೆಟ್ಟಿ ಹೊಸದೊಂದು ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಹೆಸರು ಕಿರಿಕ್ ಪಾರ್ಟಿ. ಅದರ ಟ್ರೇಲರ್ ಬಿಡುಗಡೆಯಾಗಿದ್ದು ಭರ್ಜರಿ ಹಿಟ್ ಆಗಿದೆ.
ಟ್ರೇಲರ್ ಬಿಡುಗಡೆ ಮಾಡಿದ 8 ಗಂಟೆಗಳಲ್ಲಿ 50 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆಂದು ಖುದ್ದು ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಸ್ವತಃ ರಕ್ಷಿತ್ ಶೆಟ್ಟಿ ಬರೆದ ಸಿನಿಮಾವಿದು.
ಟ್ರೇಲರ್ ನೋಡುವಾಗ ಪಕ್ಕಾ ಕಾಲೇಜ್ ಸ್ಟೋರಿ ಎನ್ನುವುದು ಖಚಿತವಾಗುತ್ತದೆ. ಕಾಲೇಜು ಹುಡುಗರ ತುಂಟಾಟಗಳು, ಕೆಟ್ಟ ಚಾಳಿಗಳು, ಹುಡುಗಿಯರ ಹಿಂದೆ ಬೀಳುವ ರೋಮಿಯೋಗಳು, ಸೀನಿಯರ್ ಗಳ ವಿರುದ್ಧ ಸಿಡಿದೇಳುವ ಹೈಕಳುಗಳು ಎಲ್ಲರೂ ಸಿಗುತ್ತಾರೆ ಎಂದು ಟ್ರೇಲರ್ ತೋರಿಸುತ್ತದೆ. ಒಟ್ಟಿನಲ್ಲಿ ಮತ್ತೊಂದು ಯೂಥ್ ಫುಲ್ ಸ್ಟೋರಿಯೊಂದಿಗೆ ರಕ್ಷಿತ್ ನಿಮ್ಮ ಮುಂದೆ ಬರಲಿದ್ದಾರೆ. ಕಾದು ನೋಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ