ಜುಲೈ 1ಕ್ಕೆ ರಾಜ್ಯಾದ್ಯಂತ ಶೀತಲ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಚಿತ್ರ ಬಿಡುಗಡೆ

ಗುರುವಾರ, 23 ಜೂನ್ 2022 (20:30 IST)
ರಂಗಿತರಂಗ ಖ್ಯಾತಿಯ ನಿರೂಪ ಭಂಡಾರಿ ಅಭಿನಯದ ವಿಂಡೋಸೀಟ್ ಚಲನಚಿತ್ರವನ್ನು ಜುಲೈ 1 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದರು.
 
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಂಡೋಸೀಟ್ ರೋಮ್ಯಾಂಟಿಕ್ ತ್ರೀಲರ್ ಚಿತ್ರವಾಗಿದ್ದು ಇದನ್ನು ಕೆಎಸ್ ಕೆ ಶೋರೀಲ್ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದಿದೆ. ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ಆನಂದ್, ಅಮೃತ ಅಯ್ಯಂಗಾರ್, ನಾಯಕನಾಗಿ ನಿರೂಪ್ ಬಂಡಾರಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ರವಿಶಂಕರ್, ಮಧುಸೂದನ್ ರಾವ್, ಲೇಖ ನಾಯ್ಡು, ಕಾಮಿಡಿ ಕಿಲಾಡಿ ಸೂರಜ್ ಸೇರಿದಂತೆ ಮುಂತಾದವರು ಅಭಿನಯ ಮಾಡಿದ್ದಾರೆ. ಚಿತ್ರದ ಅದ್ಬುತವಾಗಿ ಮೂಡಿಬಂದಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ