ಮೂವರು ಚೆಲುವೆಯ ಹಿಂದಿದೆ ರೋಚಕ ಕತೆ

ಶನಿವಾರ, 3 ಡಿಸೆಂಬರ್ 2016 (08:47 IST)
ಬೆಂಗಳೂರು: ಬಹುದಿನಗಳ ನಂತರ ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರವೊಂದು ಬರುತ್ತಿದೆ. ಅದರ ಟೀಸರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ. ಈ ಚಿತ್ರದ ಹೆಸರು ಉರ್ವಿ.

ಹೆಸರೇ ವಿಶಿಷ್ಟವಾಗಿದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ನಾಯಕಿ ಶೃತಿ ಹರಿಹರನ್ ಇಲ್ಲೊಂದು ವಿಶಿಷ್ಟ ಪಾತ್ರ ಮಾಡಿದ್ದಾರಂತೆ. ಅವರ ಜತೆ ಮಲೆ ನಾಡ ಹುಡುಗಿ ಶ್ವೇತಾ ಪಂಡಿತ್, ಶ್ರದ್ಧಾ ಕೂಡಾ ಪ್ರಧಾನ ಪಾತ್ರ ವಹಿಸಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾದ್ದರಿಂದ ನಾಯಕಿಯರೇ ನಾಯಕರು.

ಪ್ರದೀಪ್ ವರ್ಮಾ ಚಿತ್ರದ ನಿರ್ದೇಶಕರು. ಮನೋಜ್ ಜಾರ್ಜ್ ಸಂಗೀತ ನೀಡಿದ್ದಾರೆ. ಮೂವರು ವಿಭಿನ್ನ ಹುಡುಗಿಯರ ವಿಭಿನ್ನ ಸ್ವಭಾವಗಳ ಸುತ್ತ ನಡೆಯುವ ಕತೆ ಭಾರೀ ಕುತೂಹಲ ಮೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ