ಈ ಪ್ರೀತಿ ಒಂಥರಾ

AP
ಈ ವಾರದ ಚಿತ್ರ : ಈ ಪ್ರೀತಿ ಒಂಥರಾ
ನಿರ್ದೇಶನ : ಸುಬ್ರಹ್ಮಣ್ಯ ತೆಮೆಮನೆ
ತಾರಾಗಣ : ರಮೇಶ್ ಭಟ್, ಪವಿತ್ರಾ ಲೋಕೇಶ್, ಸಚಿನ್, ಮಾನ್ಯ

ಇದೊಂದು ರೊಮ್ಯಾನ್ಸ್ ಚಿತ್ರ. ನಿರ್ದೇಶಕ ಸುಬ್ರಹ್ಮಣ್ಯ ತೆಮೆ ಮನೆ ಸುರೇಶ್ ಗೋಸ್ವಾಮಿಯವರ ರೊಮ್ಯಾಂಟಿಕ್ ಕಥೆಯನ್ನು ಆಧರಿಸಿ ಚಿತ್ರ ನಿರ್ದೇಶಿಸಿದ್ದಾರೆ.

ಈ ಪ್ರೀತಿ ಒಂಥರಾ ತ್ರಿಕೋನ ಪ್ರೇಮ ಕಥಾನಕ ಹೊಂದಿದೆ. ಇಲ್ಲಿ ರಾಹುಲ್ ಮತ್ತು ಸಚಿನ್ ಇಬ್ಬರೂ ಪ್ರಿಯಾಳನ್ನು ಪ್ರೀತಿಸುತ್ತಾರೆ. ಆದರೆ ಇನ್ನೊಂದೆಡೆ ಇವರಿಬ್ಬರೂ ಪರಸ್ಪರ ಸ್ನೇಹಿತರಾಗಿರುತ್ತಾರೆ. ಆದರೆ ತಾವಿಬ್ಬರೂ ಒಬ್ಬಳನ್ನೇ ಪ್ರೀತಿಸುತ್ತಿದ್ದೇವೆ ಎಂಬುದು ಅವರ ಅರಿವಿಗೆ ಬಂದಿರುವುದಿಲ್ಲ.

ರಾಹುಲ್ ಗೆ ಅಚಾನಕ್ ಆಗಿ ಒಂದು ವರ್ಷ ವಿದೇಶದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಗುತ್ತದೆ. ಆದರೆ ತನ್ನ ಪ್ರಿಯತಮೆಯನ್ನು ಅನಿವಾರ್ಯವಾಗಿ ಬಿಟ್ಟು ಹೋಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಗೆಳೆಯ ಸಚಿನ್‌ಗೆ ಪ್ರಿಯಾಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಒಪ್ಪಿಸಿ ಬಿಡುತ್ತಾನೆ.

ಇತ್ತ ಒಂದು ವರ್ಷದ ಬಳಿಕ ವಿದೇಶದಿಂದ ಮರಳಿ ಊರಿಗೆ ಬರುವ ರಾಹುಲ್ ತನ್ನ ಸಹೋದರಿ ರೇಖಾಳಿಗೆ ಮದುವೆ ಮಾಡಿಸುವ ಹಿನ್ನೆಲೆಯಲ್ಲಿ ಪ್ರಿಯತಮೆ ಪ್ರಿಯಾಳನ್ನು ಬಿಡುವ ವಿಚಿತ್ರ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇಲ್ಲಿ ಚಿತ್ರದ ಕಥೆಗೆ ಹೊಸ ತಿರುವು ಬರುತ್ತದೆ. ಆದರೆ ಇದರಿಂದ ತೀವ್ರ ನೊಂದ ಪ್ರಿಯಾ ಆಘಾತಗೊಳ್ಳುತ್ತಾಳೆ. ಈ ಸಂದರ್ಭದಲ್ಲಿ ಸಚಿನ್ ತನ್ನ ಮನದ ಭಾವನೆಯನ್ನು ಹಂಚಿಕೊಳ್ಳಲು ಭಯಪಡುತ್ತಾನೆ. ಆದರೆ ಸಚಿನ್ ತಂದೆ ತಾಯಿ ಇವರ ಪ್ರೇಮದ ಕಥೆಯನ್ನು ಆಕೆಯಲ್ಲಿ ತಿಳಿಸುವುದೇ ಚಿತ್ರ ಟರ್ನಿಂಗ್ ಪಾಯಿಂಟ್.

ಚಿತ್ರದಲ್ಲಿ ಪ್ರಿಯಾ ಸುಂದರವಾಗಿ ಅಭಿನಯಿಸಿದ್ದಾರೆ. ಆದರೆ ಕಥೆ ನಿರೀಕ್ಷಿತ ರೀತಿಯಲ್ಲಿ ಚಿತ್ರಪ್ರೇಮಿಗಳನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಸಚಿನ್ ಹಾಗೂ ರಾಹುಲ್ ಅಭಿನಯದಲ್ಲಿ ಪಾಸ್ ಮಾರ್ಕ್ಸ್ ಪಡೆದಿದ್ದಾರೆ. ಶಮೀರ್ ಸಂಗೀತ, ಸತ್ಯಹೆಗಡೆ ಕ್ಯಾಮರಾ ವರ್ಕ್ ಚಿತ್ರದ ಪ್ಲಸ್ ಪಾಯಿಂಟ್. ಅಂದ ಹಾಗೆ ಕ್ರಿಕೆಟಿಗರಾದ ಸುನಿಲ್ ಜೋಷಿ ಹಾಗೂ ವಿಜಯ್ ಭಾರದ್ವಾಜ್ ಬಣ್ಣದಲೋಕಕ್ಕೆ ಈ ಚಿತ್ರದ ಮೂಲಕ ಎಂಟ್ರಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ