ಜೀತ ಪದ್ಧತಿ ಜೀತು.. ಪ್ರೇಮ ಪದ್ಧತಿ ರಮಾ ಇದು ಎಡ್ವಿನ್ ಸಮಾಗಮ!

ಸೋಮವಾರ, 18 ನವೆಂಬರ್ 2013 (10:32 IST)
PR
ಕೆಲವು ಬಾರಿ ನಿರ್ದೇಶಕರು ಏನೂ ಮಾಡೋಕೆ ಆಗಲ್ಲ. ಏಕೆಂದರೆ ಚಿತ್ರದ ಕಥೆ ರೀತಿ ಇರುತ್ತದೆ. ಅದೇ ರೀತಿ ಜೀತು ಚಿತ್ರವೂ ಸಹ.ಇದು ಕನ್ನಡಲ್ಲಿ ಈಗಾಗಲೇ ಸೂಪರ್ ಹಿಟ್ ಆಗಿರುವ ಚಿತ್ರಗಳನ್ನು ನೆನಪಿಸುತ್ತದೆ. ಜೀತು ಮತ್ತು ರಮಾ ಕಥಾ ನಾಯಕ ನಾಯಕಿಯರ ಹೆಸರು. ಇವರಿಬ್ಬರೂ ಪ್ರೇಮಿಗಳು. ಪ್ರೇಮಿಗಳನ್ನು ಯಾರು ಇಷ್ಟ ಪಡ್ತಾರೆ ಹೇಳಿ? ಅದೇ ಕಥೆ ಪಾಪದ ಈ ಪ್ರೇಮಿಗಳು ಎದುರಿಸ ಬೇಕಾಗುತ್ತದೆ. ಅಂತಹ ಸಮಯದಲ್ಲಿ ಅವರು ಒಂದು ನಿರ್ಧಾರಕ್ಕೆ ಬರ್ತಾರೆ. ನಾವಿಬ್ಬರು ಇಲ್ಲಿದ್ದರೆ ಉಳಿಗಾಲವಿಲ್ಲ. ಆದ್ದರಿಂದ ಊರು ಬಿಟ್ಟು ಓಡಿ ಹೋಗೋಣ ಸರಿ ಇಬ್ಬರೂ ಊರಿಂದ ಜಾಗ ಖಾಲಿ ಮಾಡ್ತಾರೆ ಅವರಿಬ್ಬರನ್ನು ಹುಡುಕಿಕೊಂಡು ನಾಯಕನ ತಾಯಿ ಬರ್ತಾರೆ. ಜೀತು ಮತ್ತು ರಮಾ ಪ್ರೇಮಿಗಳು. ಚಿತ್ರಕ್ಕೆಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತಿರುವವರು ನಿರ್ದೇಶಕ ಎಡ್ವಿನ್. ಇದೊಂದು ಜೀತ ಪದ್ದತಿಯಲ್ಲಿ ಅರಳುವ ಪ್ರೇಮ್ ಕಹಾನಿ! ಚಿತ್ರದಲ್ಲಿ ಶ್ರೀಮಂತ ನ ಕೆಲಸ ಬಡವರಿಗೆ ಸಾಲ ನೀಡುವುದು. ಅ ಸಾಲ ತೀರಿಸದೇ ಇದ್ದಾಗ ಜೀತ ಪದ್ಧತಿಗೆ ಕರೆಯುವುದು. ಆ ಸಾಹುಕಾರನ ಮಗ ದುಷ್ಟರಲ್ಲಿ ದುಷ್ಟ. ಇಲ್ಲಿ ಕಥೆಯ ನಾಯಕ ಮತ್ತು ನಾಯಕಿ ಇಬ್ಬರೂ ಬಡವರು. ಈ ಎರಡೂ ಕುಟುಂಬದವರು ಜೀತ ಪದ್ಧತಿಗೆ ಬಲಿಯಾದವರು. ಸಾಹುಕಾರನ ಮಗನಿಗೆ ನಾಯಕಿಯನ್ನು ಪಡೆಯುವ ಆಸೆ ಆಗುತ್ತದೆ.

ಊರು ಬಿಟ್ಟು ಬೇರೆ ಊರಿಗೆ ಬಂದ ನಾಯಕ ಅಲ್ಲಿ ಐಟಂ ಗರ್ಲ್ ನೀತು ಳನ್ನು ಭೇಟಿ ಆಗ್ತಾನೆ. ಈಗಿನ ಚಿತ್ರಕ್ಕೆ ಬೇಕಾದ ಮಸಾಲೆ,ಎಲ್ಲವೂ ಸೇರಿಸಿ ಜೀತಪ್ಲಸ್ ಮಾರ್ಡನ್ ಸಿಟಿ ಲೈಫ್ ತೋರುವ ಪ್ರಯತ್ನ ಮಾಡಲಾಗಿದೆ.

ಎಲ್ಲಾ ತಂತ್ರಜ್ಞರೂ ತಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಚಿತ್ರನಾಯಕ ಜೀತು ಮತ್ತು ನಾಯಕಿ ರಚನಾ ಗೌಡ ಪಾತ್ರಕ್ಕೆ ಮೋಸ ಮಾಡಿಲ್ಲ. ಒಟ್ಟಾರೆ ಹಾಗೆ ಸುಮ್ಮನೇ ಟೈಮ್ ಪಾಸ್ ಚಿತ್ರವಾಗಿ ಜೀತು ಮೂಡಿ ಬಂದಿದೆ.

ವೆಬ್ದುನಿಯಾವನ್ನು ಓದಿ