ಆಲಿಯಾಗೆ ಕತ್ರೀನಾ ಜೊತೆ ಅಭಿನಯಿಸುವ ಆಸೆಯಂತೆ

ಬುಧವಾರ, 22 ಜೂನ್ 2016 (08:56 IST)
ಬಾಲಿವುಡ್ ನ ಅತ್ಯಂತ ಅದೃಷ್ಟವಂತ ನಟಿ ಅಂತೇನಾದ್ರು ಹೇಳಿದ್ರೆ ಅದು ಆಲಿಯಾ ಭಟ್ ಅವರು ಅಂತಾನೇ ಹೇಳಬಹುದು.ಯಾಕಂದ್ರೆ ಅತೀ ಕಿರಿಯ ವಯಸ್ಸಿನಲ್ಲಿ ಬಾಲಿವುಡ್ ನಲ್ಲಿ ಅತೀ ದೊಡ್ಡ ಸ್ಟಾರ್‌ಗಳೆಂದು ಗುರುತಿಸಿಕೊಳ್ಳುವ ಅನೇಕ ನಟರೊಂದಿಗೆ ಅಭಿನಯಿಸಿದ್ದಾರೆ ಆಲಿಯಾ.ಅಲ್ಲದೇ ಅತೀ ಉತ್ತಮ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.

ಸಿನಿಮಾರಂಗದಲ್ಲಿ ಒಂದು ಮಾತಿದೆ. ಒಬ್ಬ ನಟಿಯನ್ನು ನೋಡಿದ್ರೆ ಮತ್ತೊಬ್ಬರಿಗೆ ಆಗಲ್ಲ. ಆದ್ರೆ ಆಲಿಯಾ ಭಟ್ ಅವರು ಹೇಳಿರುವ ಮಾತನ್ನು ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.ಆಲಿಯಾ ಅವರು ತನಗೆ ನಟಿಯೊಬ್ಬರೊಂದಿಗೆ ಅಭಿನಯಿಸಬೇಕು ಅಂತಾ ಹೇಳಿದ್ದಾರೆ.ಅವರು ಬೇರಾರು ಅಲ್ಲ. ನಟಿ ಕತ್ರೀನಾ ಕೈಫ್ ಅವರು. 
 
ಮೊನ್ನೆ ಮುಂಬೈನಲ್ಲಿ ಕತ್ರೀನಾ ಕೈಫ್ ಅವರೊಂದಿಗೆ ಉಡ್ತಾ ಪಂಜಾಬ್ ಸಿನಿಮಾ ವೀಕ್ಷಿಸಿ ಮಾತನಾಡಿದ ಆಲಿಯಾ ಭಟ್ ಅವರು ಒಂದು ವೇಳೆ ನಾವಿಬ್ಬರು ಜೊತೆಯಾಗಿ ಸಿನಿಮಾದಲ್ಲಿ ಅಭಿನಯಿಸಿದ್ರೆ ಅದನ್ನು ನೋಡೋದಕ್ಕೆ ತುಂಬಾನ ಚೆನ್ನಾಗಿರುತ್ತೆ. ನಾವಿಬ್ಬರ ಒಂದೇ ರೀತಿ ಇದ್ದೀವಿ. ನನಗೆ ಕತ್ರೀನಾ ಜೊತೆ ಅಭಿನಯಿಸಬೇಕು ಅನ್ನೋ ಆಸೆಯಿದೆ ಅಂತಾ ಅವರು ಹೇಳಿದ್ದಾರೆ.
ಇನ್ನು ನಾನೇದ್ರು ಮುಂದೆ ಇಂತಹದ್ದೇ ಸಿನಿಮಾ ಮಾಡಬೇಕು ಅಂತೇನಾದ್ರೂ ಅಂದುಕೊಂಡಿದ್ರೆ ಅದು ಕತ್ರೀನಾ ಕೈಫ್ ಅವರ ಜೊತೆ. ನಾನು ಫರ್ಹಾನ್ ಅವರಿಗೆ ಅನೇಕ ಸಲ ದಿಲ್ ಚಾಹ್ತಾ ಹೈ ಸಿನಿಮಾದ ಸೀಕ್ವೆಲ್ ಮಾಡುವಂತೆ ಕೇಳಿಕೊಂಡಿದ್ದೇನೆ.ಆ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋದು ನನ್ನ ಬಹು ದೊಡ್ಡ ಆಸೆ ಅಂತಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ