ಪ್ರಿಯಾಂಕಾ ಛೋಪ್ರಾ

ಶುಕ್ರವಾರ, 21 ನವೆಂಬರ್ 2014 (17:25 IST)
ಭಾರತೀಯ ಸೇನಾ ವೈದ್ಯರೊಬ್ಬರ ಮಗಳಾಗಿ ಜನಿಸಿ ಬಾಲಿವುಡ್ ಜಗತ್ತಿನಲ್ಲಿ ಅಸ್ವಿತ್ವ ಸಾಧಿಸಲು ಮುನ್ನುಗ್ಗುತಿರುವ ಪ್ರಿಯಾಂಕಾ ಛೋಪ್ರಾ ಉತ್ತರ ಪ್ರದೇಶದ ಲಕ್ನೋದವರು.
 
ತಂದೆ ಡಾ.ಕ್ಯಾಪ್ಟನ್ ಅಶೋಕ್ ಛೋಪ್ರಾ ಮತ್ತು ತಾಯಿ ಡಾ.ಮಧು ಅವರ ಮುದ್ದಿನ ಮಗಳಾಗಿ 1982ರ ಜುಲೈ 18ರಂದು ಲಕ್ನೋದಲ್ಲಿ ಜನಿಸಿದ ಪ್ರಿಯಾಂಕಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಲಕ್ನೋದಲ್ಲಿಯೆ ಮುಗಿಸಿ ಉನ್ನತ ವ್ಯಾಸಾಂಗವನ್ನು ಅಮೆರಿಕದ ಬೋಸ್ಟನ್ ನಗರದಲ್ಲಿ ಪೂರೈಸಿಕೊಂಡರು.
 
ಮಾಹಿತಿ ತಂತ್ರಜ್ಞೆ ಅಥವಾ ಅಪರಾಧ ಮನಶಾಸ್ತ್ರಜ್ಞೆಯಾಗುವ ಕನಸು ಹೊತ್ತು ಬೋಸ್ಟನ್‌ನಿಂದ ಆಗಮಿಸಿದ ನಂತರ ಪ್ರಿಯಾಂಕಾ ನೇರವಾಗಿ ಭಾಗವಹಿಸಿದ್ದು 'ಫೆಮಿನಾ ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ.  ಅಪ್ರತಿಮ ಸುಂದರಿಯಾಗಿದ್ದ ಪ್ರಿಯಾಂಕಾ ನಿರೀಕ್ಷೆಯಂತೆಯೆ 'ಫೆಮಿನಾ ಮಿಸ್ ಇಂಡಿಯಾ' ಆಗಿ ಆಯ್ಕೆಯಾಗುವ ಮೂಲಕ ರಾಷ್ಟ್ರದ ಗಮನವನ್ನು ಸೆಳೆದರು.
 
ಭಾರತವನ್ನು ಪ್ರತಿನಿಧಿಸಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಅಲ್ಲಿಯೂ ಯಶಸ್ವಿಯಾಗಿ 2000 ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾದರು.
 
ತಮ್ಮ ಮೂಲ ವೃತ್ತಿಯ ಮಹತ್ವಾಕಾಂಕ್ಷೆಯನ್ನು ಬದಿಗೊತ್ತಿ ಬಾಲಿವುಡ್ ಜಗತ್ತಿನ ಆಕರ್ಷಣೆಗೆ ಒಳಗಾಗಿ 2002ರಲ್ಲಿ ಚಿತ್ರ ಜಗತ್ತಿಗೆ ಕಾಲಿರಿಸಿದರು.
ಅನ್ನೊರ್ವ ಮಾಜಿ ವಿಶ್ವಸುಂದರಿ ಐಶ್ವರ್ಯ್ ಬಚ್ಚನ್‌ರಂತೆಯೆ ಪ್ರಿಯಾಂಕಾ ಸಹ ತಮಿಳು ಚಿತ್ರರಂಗದಿಂದಲೆ ತಮ್ಮ ಬಣ್ಣದ ಜಗತ್ತಿನ ಭವಿಷ್ಯವನ್ನು ಆರಿಸಿಕೊಂಡರು.
 
2002ರಲ್ಲಿ 'ತಮಿಳನ್' ಎನ್ನುವ ತಮಿಳು ಚಿತ್ರದ ನಂತರ, 2003ರಲ್ಲಿ ಹಿಂದಿ ಚಿತ್ರ ಜಗತ್ತಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ ಗೂಢಾಚಾರರ ಕುರಿತ ಚಿತ್ರ 'ದಿ ಹೀರೋ'ದಲ್ಲಿ ಮನೋಜ್ಞ ಅಭಿನಯ ನೀಡುವುದರ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನಿಂತರು.
 
ನಂತರ 'ಅಂದಾಜ್', 'ರಾಜಾ ಬಯ್ಯಾ', 'ಜಾನ್ ಕಿ ಬಾಜಿ', 'ಪ್ಲಾನ್', 'ಕಿಸ್ಮತ್', 'ಅಸಂಭವ್', 'ಮುಜ್‌ಸೆ ಶಾದಿ ಕರೋಗಿ'ಯಂತಹ ಹಿಟ್ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಅಚ್ಚೊಚ್ಚಿದ್ದು ಕೆಲವೇ ಪ್ರಮುಖ ನಟಿಯರಲ್ಲಿ ಒಬ್ಬರೆನ್ನಿಸಿಕೊಂಡು ಇನ್ನೂ ಉಜ್ವ ಭವಿಷ್ಯವನ್ನು ಹುಡುಕುತ್ತಾ ಚಿತ್ರರಂಗದಲ್ಲಿ ಮುಂದುವರೆದಿದ್ದಾರೆ.

ವೆಬ್ದುನಿಯಾವನ್ನು ಓದಿ