ನಾಳೆ ಕಿಚ್ಚ ಸುದೀಪ್​ಗೆ ಹುಟ್ಟುಹಬ್ಬದ ಸಂಭ್ರಮ

ಶುಕ್ರವಾರ, 1 ಸೆಪ್ಟಂಬರ್ 2023 (16:24 IST)
ಸ್ಯಾಂಡಲ್​ವುಡ್ ಬಾದ್​ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಾಳೆ 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಸುದೀಪ್ ಅಬಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಕೊರೋನಾ ಹಾಗೂ ಅಪ್ಪು ಅಗಲಿಕೆಯ ಕಾರಣಗಳಿಂದ 3 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಅದ್ಧೂರಿ ಹಾಗೂ ಅವಿಸ್ಮರಣೀಯವಾಗಿ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಇಂದು ರಾತ್ರಿ 10 ಗಂಟೆಯಿಂದ 12 ಗಂಟೆವರೆಗೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳನ್ನು ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಭೇಟಿ ಮಾಡಲಿದ್ದಾರೆ. ನಿನ್ನೆಯೇ ಸುದೀಪ್ ಪತ್ನಿ ಪ್ರಿಯಾ ಸುದೀಪ್ ವೇದಿಕೆ ತಪಾಸಣೆ ನಡೆಸಿದ್ದು, ಬೃಹತ್ ವೇದಿಕೆ ಮೇಲೆ ಕಿಚ್ಚನಿಂದ ಅಭಿಮಾನಿಗಳಿಗೆ ಹತ್ತಾರು ಸರ್​ಪ್ರೈಸ್​ಗಳು ಸಿಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ