‘ಗೌರಿ ಲಂಕೇಶ್ ಭದ್ರತೆ ಕೇಳಿರಲಿಲ್ಲ, ಅದಕ್ಕೇ ಕೊಟ್ಟಿರಲಿಲ್ಲ’
‘ಕೇಂದ್ರ ಸಚಿವರು ರಾಜ್ಯ ಸರ್ಕಾರಕ್ಕೆ ಗೌರಿಗೆ ಬೆದರಿಕೆ ಇತ್ತು ಎಂದು ಗೊತ್ತಿದ್ದೂ ಭದ್ರತೆ ಒದಗಿಸಿರಲಿಲ್ಲ ಎಂದು ಹೇಳಿದ್ದಾರೆ. ಇದು ಕೇಂದ್ರ ಸಚಿವರಾಗಿದ್ದುಕೊಂಡು ಅದರಲ್ಲೂ ಕಾನೂನು ಸಚಿವರಾಗಿದ್ದುಕೊಂಡು ಹೇಳಿರುವ ಬೇಜವಾಬ್ದಾರಿಯುತ ಹೇಳಿಕೆ’ ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.
‘ಯಾರಾದರೂ ಭದ್ರತೆ ಬೇಕೆಂದು ಕೇಳಿದಾಗ ಖಂಡಿತಾ ಕೊಡುತ್ತೇವೆ. ಇದರಲ್ಲಿ ಯಾರೂ ಹೊರತಲ್ಲ. ಆಕೆ ಯಾವತ್ತೂ ಕೇಳಿರಲಿಲ್ಲ.ಅದಕ್ಕೇ ಕೊಟ್ಟಿರಲಿಲ್ಲ’ ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.