ತೃತೀಯ ಲಿಂಗಿಗಳಿಗೆ 1% ಮೀಸಲಾತಿ

ಬುಧವಾರ, 23 ಫೆಬ್ರವರಿ 2022 (14:46 IST)
ಶಿಕ್ಷಕರ ನೇಮಕಾತಿಯಲ್ಲಿ ಶೇ. 1 ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯ ಸರ್ಕಾರವು ಜನವರಿ 21 ರಂದು ಈ ಸಂಬಂಧ ಕರಡು ನಿಯಮಾವಳಿ ಪ್ರಕಟಿಸಿದ್ದು, ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಿದೆ.
ಶಿಕ್ಷಕರ ನೇಮಕಾತಿಯಲ್ಲಿ ಶೇ. 1 ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲಿದೆ. ಶಿಕ್ಷಕ ಹುದ್ದೆಗೂ ಆಯಾ ವಿಷಯಗಳನ್ನು ಪದವಿಯಲ್ಲಿ ಅಧ್ಯಯನ ಮಾಡಿರುವವರನ್ನು ನೇಮಿಸುವುದು. ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಶೇ.50 ರಷ್ಟು ಅಂಕ. ಶಿಕ್ಷಕರ ಅರ್ಹತಾ ಪರೀಕ್ಷಾ ಫಲಿತಾಂಶದ ಶೇ. 20 ರಷ್ಟು ಅಂಕ, ಪದವಿಯ ಶೇ. 20 ರಷ್ಟು ಅಂಕ ಹಾಗೂ ಬಿ.ಇಡಿ, ಡಿ.ಎಡ್. ಸೇರಿದಂತೆ ಅರ್ಹ ಶಿಕ್ಷಣದ ಶೇ. 10 ರಷ್ಟು ಅಂಕಗಳನ್ನು ನೇಮಕಾತಿಗೆ ಪರಿಗಣಿಸಲು ನಿರ್ಧರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ