ಬಿಎಂಟಿಸಿ ಬಸ್ ಪೂಜೆ ಖರ್ಚಿಗೆ ಈ ವರ್ಷವು ಬರೀ 100 ಮಾತ್ರ!

ಮಂಗಳವಾರ, 4 ಅಕ್ಟೋಬರ್ 2022 (21:50 IST)
ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ.ಇತ್ತ ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಆಯುಧಪೂಜೆಯನ್ನ ಮಾಡಲಾಗ್ತಿದೆ.ಮಾರುಕಟ್ಟೆಯಲ್ಲಿ ನಿಂಬೆ, ಹೂ, ಹಾರದ ಬೆಲೆ ಹೆಚ್ಚಿದೆ.ಆದ್ರೆ ಬಿಎಂಟಿಸಿ ಸಾರಿಗೆ ಸಂಸ್ಥೆ ಬೇರೆ 100 ರೂಪಾಯಿಯಲ್ಲಿ ದಸರಾ ಆಚರಿಸಲು ಹಣ ನೀಡಿದೆ.ಹೀಹಾಗಿ ಬಿಎಂಟಿಸಿ ಯ  ಜಿಪುಣತನದ ವಿರುದ್ಧ ಚಾಲಕರು, ಕಂಡಕ್ಟರ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರು, ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಯುಧ ಪೂಜೆ ಖರ್ಚು ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್‌ಗೆ ಕೇವಲ 100 ನೀಡಿದ್ದು ,ಸಿಬ್ಬಂದಿಯ ಬೇಸರಕ್ಕೆ ಕಾರಣವಾಗಿದೆ.ಆಯುಧ ಪೂಜೆಗಾಗಿ  ವಾಹನಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ.ಸಾರಿಗೆ ಸಿಬ್ಬಂದಿ ತಾವು ನಿತ್ಯ ಓಡಿಸುವ ಬಸ್‌ಗಳನ್ನು ಇಂದು ಸಿಂಗರಿಸಿ ಪೂಜೆ ಮಾಡಿದ್ರು.
 
ಈ ಆಯುಧ ಪೂಜೆಯ ಖರ್ಚಿಗೆಂದು ಐದಾರು ವರ್ಷಗಳಿಂದ ಬಿಎಂಟಿಸಿ ಪ್ರತಿ ಬಸ್‌ಗೆ 100 ಮಾತ್ರ ನೀಡುತ್ತಾ ಬಂದಿದೆ.ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿದ್ದು, ಪೂಜೆ ಖರ್ಚು ಹೆಚ್ಚಿಸಬೇಕು ಎಂದು ಪ್ರತಿ ವರ್ಷವೂ ಚಾಲಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಹಿಂದಿನಂತೆಯೇ ಈ ಬಾರಿಯೂ ಪ್ರತಿ ಬಸ್‌ಗೆ 100 ನೀಡಿದಾರೆ.ಹೀಗಾಗಿ ಬಸ್ ಚಾಲಕರು ಅವರೇ ಹಣದಲ್ಲಿಯೇ ಆಯುಧ ಪೂಜೆ ಮಾಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ