ಬೆಂಗಳೂರಿನಲ್ಲಿ 100ರಷ್ಟು ಕೋವಿಡ್ ವ್ಯಾಕ್ಸಿನ್
ಬೆಂಗಳೂರಿನಲ್ಲಿ ಒಂದು ಅಥವಾ ಎರಡು ದಿನದೊಳಗೆ ಶೇ. 100ರಷ್ಟು ಎರಡನೇ ಡೋಸ್ ಕೊವಿಡ್ ಲಸಿಕೆ ವಿತರಣೆಯಾಗಲಿದೆ. ಬೇರೆಲ್ಲ ಜಿಲ್ಲೆಗಳಿಗಿಂತ ಬೆಂಗಳೂರಿನಲ್ಲಿ ಅತಿಹೆಚ್ಚು ಜನರು ಕೊವಿಡ್ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.ಬೆಂಗಳೂರಿನಲ್ಲಿ ಒಂದು ಅಥವಾ ಎರಡು ದಿನದೊಳಗೆ ಶೇ. 100ರಷ್ಟು ಎರಡನೇ ಡೋಸ್ ಕೊವಿಡ್ ಲಸಿಕೆ ವಿತರಣೆಯಾಗಲಿದೆ. ಕೊವಿಡ್ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರದಿಂದ ಹೊಸ ವರ್ಷಾಚರಣೆಗೆ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ರೆಸ್ಟೋರೆಂಟ್, ಸಾರ್ವಜನಿಕ ಸ್ಥಳ, ಕ್ಲಬ್ಗಳಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಅಲ್ಲದೆ, ಸಂಪೂರ್ಣವಾಗಿ ಎರಡು ಡೋಸ್ ಕೊವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಪಾರ್ಟಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.