16 ವರ್ಷದ ಬಾಲಕಿಗೆ ಅಮಲು ಬರಿಸುವ ಔಷಧಿ ನೀಡಿ ಸರಣಿ ಅತ್ಯಾಚಾರ
ಭಾನುವಾರ, 13 ಮಾರ್ಚ್ 2022 (20:33 IST)
ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವ ಇಬ್ಬರು ಮಹಿಳೆಯರು 16 ವರ್ಷದ ಬಾಲಕಿಗೆ ಅಮಲು ಬರಿಸುವ ಔಷಧಿ ನೀಡಿ, ಆಕೆಯನ್ನು ವಾರ ಕಾಲ ಕೂಡಿಟ್ಟು ಗಿರಾಕಿಗಳಿಗೆ ಒಪ್ಪಿಸಿ ಸರಣಿ ಅತ್ಯಾಚಾರಕ್ಕೆ ಒಳಪಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ. ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿರುವ ಇಬ್ಬರು ಮಹಿಳೆಯರು 16 ವರ್ಷದ ಬಾಲಕಿಗೆ ಅಮಲು ಬರಿಸುವ ಔಷಧಿ ನೀಡಿ, ಆಕೆಯನ್ನು ವಾರ ಕಾಲ ಕೂಡಿಟ್ಟು ಗಿರಾಕಿಗಳಿಗೆ ಒಪ್ಪಿಸಿ ಸರಣಿ ಅತ್ಯಾಚಾರಕ್ಕೆ ಒಳಪಡಿಸಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಆಗರ ನಿವಾಸಿ ಕಲಾವತಿ (52) ಮತ್ತು ಬಂಡೇಪಾಳ್ಯದ ರಾಜೇಶ್ವರಿ(50) ಬಂಧಿತ ಮಹಿಳೆಯರು. ಇವರ ಜೊತೆಗೆ ಹೊಸೂರಿನ ಆಟೊಮೊಬೈಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿರುವ ಕೇಶವಮೂರ್ತಿ (47), ಕೋರಮಂಗಲದ ಸತ್ಯರಾಜು(43), ಯಲಹಂಕದ ಶರತ್ (38), ಬೇಗೂರಿನ ರಫೀಕ್ (38) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೂಲಿ ಕಾರ್ಮಿಕ ದಂಪತಿಯ 16 ವರ್ಷದ ಮಗಳ ಮೇಲೆ ಲೈಂಗಿಕವಾಗಿ ಕಿರುಕುಳ ನೀಡಿದ್ದು ಇವರ ವಿರುದ್ಧ ಪೋಕ್ಸೋ, ರೇಪ್, ಅಪಹರಣ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಸಂತ್ರಸ್ತ ಹುಡುಗಿಯ ಹೆತ್ತವರು ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬಂದು ಉಳಿದುಕೊಂಡಿದ್ದರು. ಹರೆಯದ ಹುಡುಗಿ ಶಾಲೆಗೆ ಹೋಗುತ್ತಿದ್ದು ಸಂಜೆ ಶಾಲೆಯಿಂದ ಬಂದು ನೆರೆಮನೆಯ ರಾಜೇಶ್ವರಿ ಮನೆಗೆ ಹೋಗುತ್ತಿದ್ದಳು. ರಾಜೇಶ್ವರಿ ಟೈಲರಿಂಗ್ ಶಾಪ್ ಹೊಂದಿದ್ದು ಟೈಲರಿಂಗ್ ಕಲಿಯಲು ಬರುತ್ತಿದ್ದ ಹುಡುಗಿಗೆ ಅಮಲು ಪದಾರ್ಥ ನೀಡಿದ್ದಾಳೆ. ಬಳಿಕ ಕೇಶವಮೂರ್ತಿಗೆ ಹೇಳಿದ್ದು, ಆತ ಹುಡುಗಿ ಅರೆಪ್ರಜ್ಞಾವಸ್ಥೆಯಲ್ಲಿರುವಾಗಲೇ ಅತ್ಯಾಚಾರ ನಡೆಸಿದ್ದಾನೆ. ಆನಂತರ, ಹುಡುಗಿ ಎಚ್ಚರಗೊಂಡಾದ ರಕ್ತ ಬಂದು ತೀರಾ ನಿತ್ರಾಣಕ್ಕೆ ಒಳಗಾಗಿದ್ದಳು.
ಈ ಬಗ್ಗೆ ಕೇಳಿದ್ದಕ್ಕೆ, ನೀನು ತಲೆ ತಿರುಗಿ ಬಿದ್ದಿದ್ದರಿಂದ ಹೀಗಾಗಿದೆ, ಇಲ್ಲಿ ಸ್ನಾನ ಮಾಡಿಕೊಂಡು ಹೋಗು ಎಂದು ರಾಜೇಶ್ವರಿ ಒತ್ತಾಯಿಸಿದ್ದಳು. ಆನಂತರ, ಮರುದಿನವೂ ತನ್ನ ಮನೆಗೆ ಬರುವಂತೆ ರಾಜೇಶ್ವರಿ ಹುಡುಗಿಯಲ್ಲಿ ಒತ್ತಾಯಿಸಿದ್ದಳು. ನಿರಾಕರಿಸಿದಾಗ, ಅಲ್ಲಿಯೇ ಸಮೀಪದ ಕಲಾವತಿಯ ಮನೆಗೆ ಉಪಾಯದಿಂದ ಕರೆದೊಯ್ದಿದ್ದರು. ಅಲ್ಲಿಯೂ ಅಮಲು ಪದಾರ್ಥ ನೀಡಿ ಇತರ ಆರೋಪಿಗಳನ್ನು ಕರೆಸಿ, ಅವರಿಗೆ ಒಪ್ಪಿಸಿದ್ದಾರೆ. ಅರೆ ಪ್ರಜ್ಞೆಯಲ್ಲಿರುವಾಗಲೇ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಒಂದು ವಾರ ಕಾಲ ಹುಡುಗಿಯನ್ನು ಹಿಡಿದಿಟ್ಟು ಆರೋಪಿಗಳಿಗೆ ಒದಗಿಸಿದ್ದು ಒಂದು ದಿನ ಮೈಯಲ್ಲಿ ರಕ್ತದ ಕಲೆಗಳು ಇದ್ದುದನ್ನು ಹುಡುಗಿಯ ತಾಯಿ ಗಮನಿಸಿ, ಪ್ರಶ್ನೆ ಮಾಡಿದ್ದಾರೆ.
ಈ ವೇಳೆ, ಕಲಾವತಿ ಮತ್ತು ರಾಜೇಶ್ವರಿ ವಿಚಾರವನ್ನು ಹೇಳಿದ್ದಾಳೆ. ತನ್ನ ಮೇಲೆ ಅತ್ಯಾಚಾರ ಆಗಿರುವುದನ್ನು ಹೇಳಿದ್ದು, ತಾಯಿ ಎಚ್ಎಸ್ಆರ್ ಲೇಔಟ್ ಠಾಣೆಗೆ ತೆರಳಿ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ಪತ್ತೆಗಾಗಿ ತಂಡವನ್ನು ರಚಿಸಿದ್ದು, ಇಬ್ಬರು ಮಹಿಳೆಯರು ಸೇರಿ ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಎರಡೇ ದಿನದಲ್ಲಿ ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ತಮ್ಮ ಮನೆಯಲ್ಲೇ ವೇಶ್ಯಾವೃತ್ತಿ ನಡೆಸುತ್ತಿದ್ದು, ಅದಕ್ಕಾಗಿ ತಮ್ಮದೇ ನೆಟ್ವರ್ಕ್ ಬೆಳೆಸಿಕೊಂಡಿದ್ದರು. ಇದಲ್ಲದೆ, ತಮ್ಮಲ್ಲಿ ಟೈಲರಿಂಗ್ ಕೆಲಸಕ್ಕೆ ಬರುತ್ತಿದ್ದ ಇತರ ಯುವತಿಯರನ್ನು ಕೂಡ ಆಮಿಷವೊಡ್ಡಿ ಸೆಕ್ಸ್ ವೃತ್ತಿಗೆ ಇಳಿಸುತ್ತಿದ್ದರು ಅನ್ನುವುದನ್ನು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ.