24 ಗಂಟೆಗಳಲ್ಲಿ ಕೆಆರ್‌ಎಸ್‌ ನಲ್ಲಿ 2.50 ಅಡಿ ನೀರು ಭರ್ತಿ

ಮಂಗಳವಾರ, 11 ಜುಲೈ 2023 (11:57 IST)
ಮಂಡ್ಯ : ಮುಂಗಾರು ಮಳೆಯ ಕಣ್ಣಾ ಮುಚ್ಚಾಲೆಯಿಂದ ಕಾವೇರಿ ನೀರು ಅವಲಂಬಿತ ಜನರಲ್ಲಿದ್ದ ಆತಂಕ ಈಗ ಸ್ವಲ್ಪ ದೂರವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ 2.50 ಅಡಿ ನೀರು ಭರ್ತಿಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಡ್ಯಾಂಗೆ ಎರಡು ದಿನಗಳ ಅವಧಿಯಲ್ಲಿ 3 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣವೂ ಹೆಚ್ಚಾಗಿದೆ.

ಇದರಿಂದ 24 ಗಂಟೆಯಲ್ಲಿ 2.50 ಅಡಿ ನೀರು ಭರ್ತಿಯಾಗಿದೆ.  ಶನಿವಾರ ಬೆಳಗ್ಗೆ 82 ಅಡಿಯಷ್ಟಿದ್ದ ಜಲಾಶಯದ ನೀರಿನ ಮಟ್ಟ ಭಾನುವಾರ (ಜು.9) 84.50 ಅಡಿಗಳಿಗೆ ತಲುಪಿದೆ. ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಹೊಂದಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 12.915 ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನ ಒಳಹರಿವು 14,556 ಕ್ಯೂಸೆಕ್ ಇದ್ದು, 367 ಕ್ಯೂಸೆಕ್ ಹೊರಹರಿವು ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ