ಬೆಂಗಳೂರು : ಪಾದರಾಯನಪುರ ವಾರ್ಡ್ ಕೈ ಸದಸ್ಯ ಕಾರ್ಪೋರೇಟರ್ ಇಮ್ರಾನ್ ಪಾಷಾ 3 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ.
ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜಡ್ಜ್ ಮುಂದೆ ಹಾಜರುಪಡಿಸಿದ್ದು, 3 ದಿನ ಪೊಲೀಸರ ವಶಕ್ಕೆ ನೀಡಿ ಜಡ್ಜ್ ಆದೇಶ ಮಾಡಿದ್ದರು. ಹೀಗಾಗಿ ಪೊಲೀಸರು 3 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ. ಕೋವಿಡ್ ಕಾಯ್ದೆ ಉಲ್ಲಂಘಿಸಿದ ಹಿನ್ನಲೆ ಒಟ್ಟು 22 ಜನರ ಸೆರೆಹಿಡಿಯಲಾಗಿದೆ. 22 ಜನರಿಗೂ ಬೆಂಗಳೂರಿನ ಹೋಟೆಲೊಂದರಲ್ಲಿ ಕ್ವಾರಂಟೈನ್ ಮಾಡಿದ್ದು, ಎಲ್ಲರಿಗೂ ಅಧಿಕಾರಿಗಳು ಕೋವಿಡ್-19 ಟೆಸ್ಟ್ ಮಾಡಿದ್ದಾರೆ.
ಇಂದು ಅಥವಾ ನಾಳೆ ಕೋವಿಡ್ ಟೆಸ್ಟ್ ವರದಿ ಬರುವ ಸಾಧ್ಯತೆ ಇದ್ದು, ವರದಿಯಲ್ಲಿ ಪಾಸಿಟಿವ್ ಬಂದ್ರೆ ಆಸ್ಪತ್ರೆ ,ನೆಗೆಟಿವ್ ಬಂದ್ರೆ ಜೈಲು ಎಂದು ತೀರ್ಮಾನಿಸಲಾಗಿದೆ. ಆದಕಾರಣ ಆರೋಪಿಗಳ ವರದಿಗೆ ಪೋಲೀಸ್ ಅಧಿಕಾರಿಗಳು ಕಾಯುತ್ತಿದ್ದಾರೆ ಎನ್ನಲಾಗಿದೆ.