ರಾಜ್ಯ ಸಂಬಳದಲ್ಲಿ 30ನೇ ಸ್ಥಾನ

ಮಂಗಳವಾರ, 28 ಫೆಬ್ರವರಿ 2023 (17:50 IST)
2022ರಿಂದ ನೋಡುತ್ತಿದ್ದೇವೆ, ಯಾವುದೇ ಸಮಸ್ಯೆ ಬಗೆಹರಿಸಿಲ್ಲ. ಸಿಎಂ ಗಮನಕ್ಕೂ ತಂದೇ ಹೋರಾಟಕ್ಕೆ ಇಳಿಯುತ್ತಿದ್ದೇವೆ. ಸಮಿತಿ ರಚನೆ ಮಾಡಿ 4 ತಿಂಗಳಾಗಿದೆ. ವೇತನ ಆಯೋಗ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
 
ಈವರೆಗೂ ಯಾವುದೇ ಕ್ರಮ ಆಗಿಲ್ಲ. ಎಲ್ಲಾ ರೀತಿ ಯೋಚನೆ ಮಾಡಿ ನಿರ್ಧಾರ ಕೈಗೊಂಡಿದ್ದೇವೆ. ಪಾಠ ಮಾಡಿದವರು ಪರೀಕ್ಷೆ ಮಾಡಲ್ವಾ? ಎಲ್ಲಾ ರೀತಿಯ ಕೆಲಸ ಆಗುತ್ತಿದೆ. ವೈದ್ಯರು ಕೂಡ ಜೊತೆಯಲ್ಲಿದ್ದಾರೆ.

ಟ್ಯಾಕ್ಸ್ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ಸಂಬಳದಲ್ಲಿ 30ನೇ ಸ್ಥಾನದಲ್ಲಿದ್ದೇವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಯಾವುದೇ ಇತರೆ ಕೆಲಸ ಇರುವುದಿಲ್ಲ. ಸರ್ಕಾರದ ಬಗ್ಗೆ ನನಗೆ ಗೌರವ ಇದೆ. ಯಡಿಯೂರಪ್ಪ ಅವರ ಬಗ್ಗೆ ಗೌರವ ಇದೆ. ಅವರು 7ನೇ ವೇತನ ಜಾರಿಗೆ ಸರ್ಕಾರವನ್ನು ಒತ್ತಾಯಿಸಿದ್ದರು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ