ಕೇರಳಾ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು
, ಕೋಲಾರದಲ್ಲಿ ಸೋಂಕಿನ ಅತಂಕ ಎದುರಾಗಿದೆ.
ಈಗಾಗಲೇ ಕೆಜಿಎಫ್ ನಗರದಲ್ಲಿರುವ ನೂರುನ್ನಿಸ್ಸಾ ನರ್ಸಿಂಗ್ ಕಾಲೇಜಿನಲ್ಲಿ ಕೇರಳಾ ಮೂಲದಿಂದ ಬಂದಿದ್ದ 32 ವಿದ್ಯಾರ್ಥಿನಿಯರಲ್ಲಿ ಸೋಂಕು ಕಂಡು ಬಂದ ಹಿನ್ನೆಲೆ ಇಡಿ ಕಾಲೆಜನ್ನ ಕಂಟೊಮೆಟ್ ಜೋನ್ ಮಾಡಿ ಸಿಲ್ ಡೌನ್ ಮಾಡಲಾಗಿದೆ, ಎಂದು ರಾಜ್ ನ್ಯೂಸ್ ಗೆ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಹೇಳಿದ್ದಾರೆ.
ಕೋವಿಡ್ ಪಾಸಿಟೀವ್ ಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ, ಒಟ್ಟು 265 ಜನ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಾ ಇದ್ದು, ಕೇರಳದಿಂದ ಬಂದಿದ್ದ 149 ಜನರ ಪೈಕಿ ಬಹುತೇಕರಲ್ಲಿ ಪಾಸಿಟಿವ್ ಕಂಡು ಬಂದಿದೆ ಇನ್ನು ಕೇರಳಾದಿಂದ ಬರುವ ಪ್ರತಿಯೊಬ್ಬರಿಗೂ ಸರ್ಕಾರ ನಿಯಮದಂತೆ, ಖಡ್ಡಾಯವಾಗಿ ಆರ್.ಪಿ.ಸಿ.ಆರ್ ಟೆಸ್ಟ್ ಮಾಡಿಸಿರಬೇಕು, ಜೊತೆಗೆ ಒಂದು ಡೋಸ್ ವಾಕ್ಸಿನೇಷನ್ ಮಾಡಿಸಿಕೊಂಡಿರುಬೇಕು ಎಂದರು.
ಕೇರಳದಿಂದ ಬಂದ ವಿದ್ಯಾರ್ಥಿಗಳು ನೀಡಿರುವ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಸರ್ಟಿಪೀಕೇಟ್ ಹಾಗು ವಾಕ್ಸಿನ್ ಪಡೆದುಕೊಂಡಿರುವ ಬಗ್ಗೆ ದಾಖಲನೆಗಳನ್ನ ಕಾಲೇಜಿಗೆ ನೀಡಿದ್ದು ದಾಖಲೆಯ ನೈಜತೆಯನ್ನು ಪರಿಶೀಲನೆ ನಡೆಸಲಾಗುತ್ತಿದೆ, ಟೆಸ್ಟ್ ಮಾಡಿ ಪಾಸಿಟಿವ್ ಬರದೇ ಇರುವ ವಿದ್ಯಾರ್ಥಿಗಳು ಆರೋಗ್ಯವಾಗಿದ್ದು, ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಪಡಿಸಲಾಗಿದೆ, ಕೋವಿಡ್ ಟೆಸ್ಟ್ ಮಾಡಿಸಿರುವ ಅಷ್ಟು ಮಂದಿ ವಿದ್ಯಾರ್ಥಿಗಳನ್ನು ಕ್ವಾರೆಂಟೈನ್ ಮಾಡಲಾಗಿದೆ, ಕೋವಿಡ್ ನಿಯಮದ ಪ್ರಕಾರ ಕಾಲೇಜಿನ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.