ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಅರ್ಚಕ ವೃತ್ತಿ ಮಾಡುತ್ತಿದ್ದ ಆರೋಪಿ ವೆಂಕಟರಮಣಪ್ಪ ತನ್ನ ಮಗಳ ಮನೆಗೆ ಬಂದಿದ್ದಾಗ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಸ್ವೀಟ್ ಕೊಡಿಸುವುದಾಗಿ ಮನೆಯೊಳಗೆ ಕರೆದೊಯ್ದು ಹೀನ ಕೃತ್ಯವೆಸಗಿದ್ದಾನೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ ಎನ್ನಲಾಗಿದೆ. ಮಗಳನ್ನು ಕಾಣದೇ ಮನೆಯವರು ಹುಡುಕುತ್ತಿದ್ದಾಗ ಆಕೆ ಅರ್ಚಕರ ಮನೆಯೊಳಗೆ ಹೋಗಿದ್ದನ್ನು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇದರಿಂದಾಗಿ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.