ವಿದೇಶದಿಂದ ಬಂದವರು 66 ಜನರು : ಈ ಜಿಲ್ಲೆಯಲ್ಲಿ ಕೊರೊನಾ – ಕಟ್ಟೆಚ್ಚರ

ಭಾನುವಾರ, 15 ಮಾರ್ಚ್ 2020 (15:53 IST)
ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಜಿಲ್ಲೆಗೆ ಭಾರತೀಯರು ಮತ್ತು ವಿದೇಶಿಯರು ಆಗಮಿಸಿರುವ ಬಗ್ಗೆ ಗುರುತಿಸಿದ್ದು, ಈ ಪೈಕಿ ಕೊರೋನಾ ಸೋಂಕು ಲಕ್ಷಣ ಹೊಂದಿರುವ ನಾಲ್ವರ ಗಂಟಲು ಸ್ವ್ಯಾಬ್‍ಗಳನ್ನು ಲ್ಯಾಬ್‍ಗಳಿಗೆ ಕಳುಹಿಸಲಾಗಿದೆ.

ಇಲ್ಲಿಯವರೆಗೆ ಲಭಿಸಿರುವ ವೈದ್ಯಕೀಯ ವರದಿಯ ಅನ್ವಯ ಒರ್ವ ನೆಗಟಿವ್ ಹಾಗೂ ಇನ್ನು ಮೂವರ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಡಿಸಿ. ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ವಿಜಯಪುರ ಜಿಲ್ಲೆಯಲ್ಲಿ ಗುರುತಿಸಲಾದ 66 ವಿದೇಶದಿಂದ ಮರಳಿರುವವರ ಪೈಕಿ 62 ಜನರಿಗೆ ಕೊರೋನಾ ರೋಗ ಲಕ್ಷಣಗಳು ಕಂಡು ಬಂದಿಲ್ಲವೆಂದು ದೃಢಪಡಿಸಿದ್ದಾರೆ.
ಕೊರೋನಾ ಸೋಂಕಿತರನ್ನು ಚಿಕಿತ್ಸೆಗಾಗಿ ಜಿಲ್ಲೆಯ ವಿವಿಧ ಕಡೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ವಿಶ್ವದಾದ್ಯಂತ ಕೋವಿಡ್ -19 ಕೊರೋನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್ (ಟೂಪ್ಲೈ  ಹಾಗೂ ತ್ರೀಪ್ಲೈ) ಸರ್ಜಿಕಲ್ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಜ್‍ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂತಹ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡದಂತೆ ಹಾಗೂ ಅದನ್ನು ಎಮ್.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ