ನಾನು ಯಾರು ಗೊತ್ತಾ ಮೋದಿಜಿ ಪ್ರಶ್ನೆಗೆ 8 ವರ್ಷದ ಪುಟ್ಟ ಬಾಲಕಿಯ ಉತ್ತರ ಸಕ್ಕತ್ತಾಗಿದೆ...!!!!

ಗುರುವಾರ, 28 ಜುಲೈ 2022 (14:48 IST)
ಸಂಸದರ ಮಗಳು ಪ್ರಧಾನಿ ಅವರನ್ನು ಭೇಟಿ ಮಾಡಿದರು. 8 ವರ್ಷದ ಪುಟ್ಟ ಬಾಲಕಿಯನ್ನು ನೋಡಿದ ಮೋದಿ, ಎಂದಿನ ಲಹರಿಯಂತೆಯೇ ನಾನು ಯಾರೆಂದು ನಿಮಗೆ ಗೊತ್ತೇ ಎಂದು ಪ್ರಶ್ನೆಯ ಬಾಣವನ್ನು ಎಸೆದರು.
 
ತಕ್ಷಣವೇ ಆ ಬಾಲಕಿ ಹೌದು ನನಗೆ ಗೊತ್ತು. ನೀವು ಮೋದಿ ಜೀ ಎಂದು ಉತ್ತರ ನೀಡಿಯೇ ಬಿಟ್ಟಳು.
 
ಅಷ್ಟೇ ಅಲ್ಲ ಮಾತು ಮುಂದುವರಿಸಿದ ಬಾಲಕಿ, ನಾನು ನಿಮ್ಮನ್ನು ಟಿವಿಯಲ್ಲಿ ನೋಡುತ್ತೇನೆ ಎಂದು ಪಟಪಟಾ ಎಂದು ಉತ್ತರ ನೀಡಿದಳು.
 
ಲೋಕಸಭೆ ಟಿವಿಯಲ್ಲಿ ಕೆಲಸ ಮಾಡುತ್ತೀರಿ. (ಲೋಕಸಭಾ ಟಿವಿ ಮೇ ನೌಕರಿ ಕರ್ತೇ ಹೋ) ಎಂದು ಆಹಾನಾ ಪ್ರಧಾನಿ ಅವರ ಪ್ರಶ್ನೆಗೆ ಮತ್ತೊಂದು ಉತ್ತರವನ್ನೂ ಹೇಳಿಯೇ ಬಿಟ್ಟಳು. ಬಾಲಕಿಯ ಈ ಮಾತು ಬರುತ್ತಿದ್ದಂತೆ ಪ್ರಧಾನಿಗಳ ಕೊಠಡಿಯಲ್ಲಿ ಎಲ್ಲರೂ ನಕ್ಕರು.
 
ಬಾಲಕಿಯ ಮುಗ್ದ ಉತ್ತರ ಕಂಡು ಖುಷಿಯಾದ ಪ್ರಧಾನಿ, ಸಂಸದರ ಪುತ್ರಿ ಆಹಾನಾಗೆ ಚಾಕೊಲೇಟ್​ ನೀಡಿದರು ...!!!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ