ಕಾರು ಡಿಕ್ಕಿಯಾಗಿ ಹಾರಿಬಿದ್ದ ವಿದ್ಯಾರ್ಥಿನಿ

ಶನಿವಾರ, 4 ಫೆಬ್ರವರಿ 2023 (20:06 IST)
ಆಕೆ ಎಂಬಿಎ ವಿದ್ಯಾರ್ಥಿನಿ.ದೂರದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸ ಮಾಡ್ತಿದ್ಳು.ತಂದೆ ಪೊಲೀಸ್ ಕಾನ್ಸ್ ಟೇಬಲ್.ಎಂದಿನಂತೆ ಕಾಲೇಜಿಗೆ ಹೋಗ್ತಿದ್ದಾಗ ಘನಘೋರವೇ ನಡೆದಿದೆ.ಕಾರೊಂದು ಡಿಕ್ಕಿಯಾಗಿದ್ದು,ಎತ್ತರಕ್ಕೆ ಹಾರಿಬಿದ್ದಿದ್ದಾಳೆ.ಘಟನೆಯ ಸಿಸಿಟಿವಿ ದೃಶ್ಯ ಬೆಚ್ಚಿಬೀಳುವಂತಿದೆ.ಯುವತಿಯ ಹೆಸರ ಸ್ವಾತಿ.ವಯಸ್ಸು 21 ವರ್ಷ.ಹುಬ್ಬಳ್ಳಿ ಮೂಲದ ಯುವತಿ ಪಟ್ಟಣಗೆರೆಯ ಪಿಜಿ ನಲ್ಲಿ ವಾಸವಾಗಿದ್ಳು.ಕೆಂಗೇರಿ ಬಳಿಯ BIMS ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಎ ಓದುತ್ತಿದ್ದಾಳೆ.ಸ್ವಾತಿ ತಂದೆ ಸದಾನಂದ ಪೊಲೀಸ್ ಕಾನ್ಸ್ ಟೇಬಲ್.ಮಗಳು ಚನ್ನಾಗಿ ಓದಿ ಬದುಕು ಕಟ್ಟಿಕೊಳ್ಳಲಿ ಅಂತಾ ದೂರದ ಬೆಂಗಳೂರಿಗೆ ಕಳುಹಿಸಿದ್ಳು.ಅಕೆ ಏನೊ ಚನ್ನಾಗಿಯೇ ಓದ್ತಿದ್ಳು.ಆದ್ರೆ ಯಾರದ್ದೋ ತಪ್ಪಿಗೆ ಇವತ್ತು ಕಣ್ಣೀರು ಹಾಕೊ‌ ಸ್ಥಿತಿ ಉಂಟಾಗಿದೆ.

ಫೆಬ್ರವರಿ 2.ಮಧ್ಯಾಹ್ನ 1.30 ರ ಸಮಯ.ಮೈಸೂರು ರಸ್ತೆ ಪಟ್ಟಣಗೆರೆ ಮೆಟ್ರೋ ನಿಲ್ದಾಣ ಬಳಿಯ ಆರ್ ವಿ ಕಾಲೇಜು ಮುಂಭಾಗದ ರಸ್ತೆ . ಸ್ವಾತಿ RV ಕಾಲೇಜ್ ಕಡೆಯಿಂದ BIMS ಕಾಲೇಜ್ ಕಡೆಗೆ ರಸ್ತೆ ದಾಟುತ್ತಿದ್ದಳು.ಆಗ ಕೆಂಗೇರಿ ಕಡೆಯಿಂದ ಬಂದ ಕಾರ್ ನಂಬರ್ KA 51 MH 7575 ವಾಹನ ಚಾಲಕ ಕೃಷ್ಣಭಾರ್ಗವ್,ತನ್ನ ವಾಹನವನ್ನ  ನಿರ್ಲಕ್ಷ್ಯತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು ಪಾದಚಾರಿ ಸ್ವಾತಿಗೆ ಡಿಕ್ಕಿ ಮಾಡಿದ್ದಾನೆ.ಪರಿಣಾಮ ಪಾದಚಾರಿ ಸ್ವಾತಿ ಕೆಳಗೆ ಬಿದ್ದು ತಲೆ, ಮೈ, ಕೈ ಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದಾಳೆ.ತಕ್ಷಣ ಆಕೆಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಪಘಾತ ಮಾಡಿದ್ದ ಕಾರು ಚಾಲಕ ಕೃಷ್ಣಭಾರ್ಗವ್ ಆರ್.ಆರ್.ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ಓದುತ್ತಿದ್ದಾನೆ.ಅಪಘಾತ ಬಳಿಕ ಕಾರು ನಿಲ್ಲಿಸದೇ ಯೂ ಟರ್ನ್ ಮಾಡಿಕೊಂಡು ಆರ್.ವಿ ಕಾಲೇಜಿನೊಳಗೆ ಹೋಗಿಬಿಟ್ಟಿದ್ದ.ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆತನ್ನ ಬಂಧಿಸಿದ್ದಾರೆ.

ಇನ್ನೂ ಘಟನೆಗೆ ಬಿಬಿಎಂಪಿ ಹಾಗೂ ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯ ಕಾರಣ ಎನ್ನಲಾಗ್ತಿದೆ.ಯಾಕಂದ್ರೆ ಕೆಂಗೇರಿಕಡೆಯಿಂದ ಬರುವ ರಸ್ತೆಯಲ್ಲಿ ಮೊದಲು ಹಂಪ್ ಹಾಕಲಾಗಿತ್ತು.8 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಗವಾಗಿ ಬಂದಾಗ ಹಂಪ್ ಅನ್ನ ತೆಗೆದುಹಾಕಲಾಗಿದೆ.ಅಲ್ಲದೇ ಸಿಗ್ನಲ್ ಕೂಡ ಅಳವಡಿಸಿಲ್ಲ.ಹಾಗಾಗಿ ವಾಹನಗಳು ಅತೀವೇಗದಿಂದ ಸಂಚರಿಸುತ್ತೆ.ಇದೇ ಕಾರಣಕ್ಕೆ ಸುತ್ತಾ ಮುತ್ತಾ ಮೂರ್ನಾಲ್ಕು ಶಾಲಾ ಕಾಲೇಜುಗಳಿದ್ದು,ವಿದ್ಯಾರ್ಥಿಗಳು ರಸ್ತೆ ದಾಟುವುದೇ ಹರಸಾಹಸವಾಗ್ತಿದೆ.ಪ್ರತಿ ಬಾರಿ ರಸ್ತೆ ದಾಟುವಾಗಲೂ ಜೀವ ಕೈಯಲ್ಲಿ ಹಿಡಿದು ದಾಟುವಂತಾಗಿದೆ.ಬಿಬಿಎಂಪಿ ಅಧಿಕಾರಿಗಳು ಹಂಪ್ ಹಾಕಿದ್ದೇ ಆದರೆ ಮುಂದಿನ ದಿನಗಳಲ್ಲಾಗುವ ಅಪಾಯ ತಡೆಯಬಹುದು.ಯಾಕಂದ್ರೆ ಇದೊಂದೇ ತಿಂಗಳಲ್ಲಿ 4 ಅಪಘಾತ ಲ್ರಕರಣ ಈ ಜಾಗದಲ್ಲಾಗಿದೆಯಂತೆ,ಏನೇ..ಹೇಳಿ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ.ವಾಹನ ಚಾಲಕನ ಅಜಾಗರೂಕತೆಯಿಂದ ಏನು ತಪ್ಪಿಲ್ಲದ ವಿದ್ಯಾರ್ಥಿನಿ ಸಾವು ಬದುಕಿನ ಹೋರಾಟ ನಡಸ್ತಿದ್ದಾಳೆ.ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ