ಲವ್ ಮಾಡಿ ಬೇರೊಬ್ಬಳ ಜೊತೆ ಮದುವೆಗೆ ಮುಂದಾದ : ಪ್ರೀತಿಸಿದವಳಿಗೆ ಗುಂಡು ಹಾಕಿದ ಪ್ರಿಯಕರ

ಬುಧವಾರ, 26 ಫೆಬ್ರವರಿ 2020 (13:45 IST)
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಇದೀಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪ್ರಿಯತಮೆ ಮೇಲೆ ಪ್ರಿಯಕರ ಗುಂಡು ಹಾರಿಸಿದ್ದಾನೆ.

ಶುಭಶ್ರೀ ಪ್ರಿಯದರ್ಶನಿ ಹಾಗೂ ಅಮರೇಂದ್ರ ಇಬ್ಬರೂ ಓಡಿಸ್ಸಾದವರು. ಬೆಂಗಳೂರಿನಲ್ಲಿದ್ದಾಗ ಎರಡ್ಮೂರು ವರ್ಷ ಇಬ್ಬರೂ ಲವ್ವಿ ಡವ್ವಿ ನಡೆಸಿದ್ದಾರೆ. ಈ ನಡುವೆ ಅಮರೇಂದ್ರ ಬೇರೆ ಊರಿಗೆ ಕೆಲಸಕ್ಕೆ ಹೋಗಿ ಬೇರೆ ಹುಡುಗಿ ಜೊತೆಗೆ ಮದುವೆ ಮಾಡಿಕೊಳ್ಳೋಕೆ ರೆಡಿಯಾಗಿದ್ದಾನೆ.

ಇದರಿಂದ ಕೆರಳಿದ ಶುಭಶ್ರೀ ತಾನು ಹಾಗೂ ಅಮರೇಂದ್ರ ಇಬ್ಬರೂ ಇರೋ ಫೋಟೊಗಳನ್ನು ಮದುವೆ ಆಗ್ತಿದ್ದ ಹುಡುಗಿ ಮೊಬೈಲ್ ಗೆ ಕಳಿಸಿ ಮದುವೆ ಮುರಿಯುವಂತೆ ನೋಡಿಕೊಂಡಿದ್ದಾಳೆ.

ಇದರಿಂದ ಕುಪಿತನಾದ ಅಮರೇಂದ್ರ ಬೆಂಗಳೂರಿಗೆ ಬಂದು ಶುಭಶ್ರೀ ಮೇಲೆ ಗುಂಡು ಹಾರಿಸಿದ್ದಾನೆ. ಆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರೂ ಇದೀಗ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ