ರಾಮನ ದರ್ಶನಕ್ಕಾಗಿ ಹರಿದು ಬಂತು ಭಕ್ತ ಸಾಗರ

ಗುರುವಾರ, 30 ಮಾರ್ಚ್ 2023 (17:30 IST)
ಇಂದು ನಾಡಿನೆಲ್ಲೆಡೆ ಶ್ರೀ ರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆಯೇ ಶ್ರೀರಾಮನನ್ನು ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷವಾದ ಪೂಜೆಗಳನ್ನು ಮಾಡಲಾಯಿತು.ಇಂದು ವಿಷ್ಣುವಿನ 07ನೇ ಅವಾತರವಾದ ಶ್ರೀ ರಾಮನ ಜನನವಾದ ದಿನ. ಚೈತ್ರ ಮಾಸದ ಒಂಬತ್ತನೇ ದಿನದಂದು ಶ್ರೀ ರಾಮನ ಜನನವಾಗಿತ್ತು ಈ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಅತ್ಯಂತ ವಿಜೃಂಭಣೆಯಿಂದ ಶ್ರೀ ರಾಮ ನವಮಿಯನ್ನು ಆಚರಿಸಲಾಯಿತು. ಬೆಳಗಿಂದಲೇ  ರಾಜಾಜಿನಗರದಲ್ಲಿರುವ ರಾಮ ಮಂದಿರಕ್ಕೆ ಸಾಕಷ್ಟು ಭಕ್ತರು ಆಗಮಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು. 

ಶ್ರೀ ರಾಮನ ರಥೋತ್ಸವವು ಸಹ ನಡೆಯಿತು ಹಾಗೆ ಈ ವರ್ಷದ ವಿಶೇಷವಾಗಿ ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಜ್ಞರ ಪ್ರತಿರೂಪವನ್ನು ತೊಟ್ಟಿಲಿನಲ್ಲಿರಿಸಿ ತೊಟ್ಟಿಲು ಶಾಸ್ತ್ರವನ್ನು ವಿಶೇಷವಾಗಿ ನೆರವೇರಿಸಲಾಯಿತು.ಇನ್ನೂ ಶ್ರೀರಾಮನವಮಿ ಎಂದರೆ ಎಲ್ಲರಿಗೂ ಮೊದಲು ನೆನಪಾಗುವುದು ಪಾನಕ, ಮಜ್ಜಿಗೆ, ಕೊಸಂಬರಿ. ಬೇಸಿಗೆ ಕಾಲವಾಗಿದ್ದು, ದೇಹದಲ್ಲಿ ಉಷ್ಣಾಂಶವು ಹೆಚ್ಚಾಗಿರುವುದರಿಂದ ಶ್ರಿ ರಾಮ ನವಮಿಗೆ ವಿಶೆಷವಾಗಿ ಪಾನಕ,ಮಜ್ಜಿಗೆ, ಕೊಸಂಬರಿಯನ್ನು ಪ್ರಸಾದದ ರೂಪದಲ್ಲಿ ಹಂಚುತ್ತಾರೆ. ಆಟೋ ಸ್ಟ್ಯಾಂಡ್, ಬಸ್ ಸ್ಟ್ಯಾಂಡ್, ಹೋಟೆಲ್‌ಗಳ ಮುಂಭಾಗ ಹೀಗೆ ಹಲವು ಕಡೆ ಪಾನಕ, ಮಜ್ಜಿಗೆ ಹಾಗೂ ಕೊಸಂಬರಿಗಳನ್ನು ಹಂಚಿದರು.ಒಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕೊವಿಡ್ ಕಾಟದಿಂದ ಶ್ರೀರಾಮ ನವಮಿಯನ್ನು ಆಚರಿಸಲು ಆಗಿರಲಿಲ್ಲ. ಆದರೆ ಈ ವರ್ಷ ಯಾವುದೇ ಭಯವಿಲ್ಲದೆ ಜನರು ಬಹಳ ಸಂತಸದಿಂದ ಶ್ರೀರಾಮ ನವಮಿಯನ್ನು ಆಚರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ