ಮಣ್ಣಿನಲ್ಲಿ ಮೂಡಿದ ಸಾಕಾರ ಮೂರ್ತಿ
ಶ್ರೀಗಳಿಗೆ ಕಲಾವಿದ ಮಂಜುನಾಥ್ ಹಿರೇಮಠ ಅವರು ಕಲಾನಮನ ಸಲ್ಲಿಸಿದ್ದಾರೆ. ಸಿದ್ದೇಶ್ವರ ಶ್ರೀಗಳ ನೆನಪಿನಲ್ಲಿ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ್ ಹಿರೇಮಠ, 11 ಕೆಜಿ ಜೇಡಿ ಮಣ್ಣಿನಲ್ಲಿ ಎರಡು ಅಡಿ ಎತ್ತರದ ಸಿದ್ದೇಶ್ವರ ಶ್ರೀಗಳ ಕಲಾಕೃತಿಯನ್ನು ರಚಿಸಿ ಶ್ರೀಗಳಿಗೆ ಕಲಾನಮನ ಸಲ್ಲಿಸಿದ್ದಾರೆ.
ಸೋಮವಾರ ಸಂಜೆ ಶ್ರೀಗಳ ನಿಧನ ಸುದ್ದಿ ತಿಳಿದ ನಂತರ ಕಲಾವಿದ ಮಂಜುನಾಥ್ ಹಿರೇಮಠ ಮಣ್ಣಿನಲ್ಲಿ ಈ ಕಲಾಕೃತಿ ರಚಿಸುವ ಮೂಲಕ ಸರಳತೆಯ ಸಾಕಾರ ಮೂರ್ತಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.