ಎದೆಹಾಲು ಕುಡಿಸುವಾಗಲೇ ಬಡಿದ ಸಿಡಿಲು, ಒಂದು ಕಿವಿ ಕಿವುಡು!
ಕೇರಳದ ತ್ರಿಶೂರ್ ಜಿಲ್ಲೆಯ ಕಲ್ಪರಂಬು ಪ್ರದೇಶದಲ್ಲಿ ಮಹಿಳೆಯೊಬ್ಬರು ಮನೆಯೊಳಗೆ ಮಗುವಿಗೆ ಹಾಲುಣಿಸುವಾಗ ಸಿಡಿಲು ಬಡಿದಿದೆ.
ಸಿಡಿಲು ಬಡಿದ ಆಘಾತಕ್ಕೆ ತಾಯಿ ಹಾಗೂ ಮಗು ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ಇನ್ನು ಸಿಡಿಲು ಬಡಿದ ಕಾರಣಕ್ಕೆ ತಾಯಿ ತನ್ನ ಒಂದು ಕಿವಿಯ ಶ್ರವಣ ನಷ್ಟವನ್ನು ಎದುರಿಸಿದ್ದಾರೆ ಎಂದು ಪೂಮಂಗಲಂ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.