ಅತ್ಯಂತ ಅದ್ಧೂರಿ, ಸಾಂಪ್ರದಯಿಕ ದೀಪಾವಳಿ ಆಚರಣೆ

ಭಾನುವಾರ, 7 ನವೆಂಬರ್ 2021 (21:23 IST)
ಬೆಂಗಳೂರು ಬಂಟರ ಸಂಘದ ವತಿಯಿಂದ ಅತ್ಯಂತ ಅದ್ಧೂರಿಯಗಿ ಹಾಗು ಸಾಂಪ್ರದಯಿಕವಾಗಿ ದೀಪಗಳ ಹಬ್ಬ  ದೀಪಾವಳಿಯನ್ನ  ಆಚರಣೆ ಮಾಡಲಾಯಿತು. 
 
ಈ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕನವರಿಗೆ ಸನ್ಮಾನ ಮಾಡಲಾಯಿತು ಜೊತೆಗೆ ಅವರ ಮನೆ ಕಟ್ಟಿ ಕೊಳ್ಳಲು ಬಂಟರ ಸಂಘದ ವತಿಯಿಂದ ಒಂದು ಲಕ್ಷ ರುಪಾಯಿ ಚೆಕ್ ನೀಡಿ ಗೌರವಿಸಲಾಯಿತು.
ಇದೇ  ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ  ಗುರುಕಿರಣ್ ಅವರಿಗೆ  ದಿ. ಡಿ. ಕೆ  ಚೌಟ ಸ್ಮಾರಕ ಸಾಂಸ್ಕೃತಿಕ ಸಾಧಕ  ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
 
ಕಾರ್ಯಕ್ರಮದಲ್ಲಿ ಕೊರೊನ ಸಂದರ್ಭದಲ್ಲಿ ಸಂಘದ ವತಿಯಿಂದ ಲಸಿಕೆ ಕಾರ್ಯಕ್ರಮ , ಅಕ್ಸಿಜನ್ ಸಿಲಿಂಡರ್ ಗಳ ಪೂರೈಕೆಯನ್ನ  ಅಗತ್ಯವಿದ್ದವರಿಗೆ ನೀಡಿದ್ದು, ಹಾಗೂ ಕೋವಿಡ್ ನಿಂದ ಮೃತ ಪಟ್ಟ ಪೋಷಕರ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸ ಕ್ಕೆ ನೆರವು   ನೀಡಿದ್ದನ್ನು  ಸ್ಮರಿಸಲಾಯಿತು.
 
ಇದೇ ವೇಳೆ ಐಕಳ ಹರೀಶ್ ಶೆಟ್ಟಿ ಅವರಿಗೆ ದಿ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು
 
ಡಾ .ಜಯಕರ ಶೆಟ್ಟಿ  ಅವರಿಗೆ  ದಿ. ಕೆ ಪಿ ರಾಮಣ್ಣ ಶೆಟ್ಟಿ ಸ್ಮಾರಕ ಶೈಕ್ಷಣಿಕ ಸಾಧಕ  ಪ್ರಶಸ್ತಿ  ನೀಡಿ ಗೌರವಿಸಲಾಯಿತು.
 
 
ಇದೇ ವೇಳೆ ಆಡಳಿತ ಪಾಲುದಾರರಾದ ಜಗನ್ನಾಥ ಶೆಟ್ಟಿ, ಹಾಗೂ ಚಂದ್ರ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷ
  ಶ್ರೀ ಐ ಎಂ ರಾಜರಾಮ ಶೆಟ್ಟಿಯವರಿಗೆ ವಿಶೇಷವಾಗಿ ಗೌರವಿಸಲಾಯಿತು.
 
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ  ಶ್ರೀ ಆರ್ ಉಪೇಂದ್ರ ಶೆಟ್ಟಿ , ಗೌರವ ಕಾರ್ಯದರ್ಶಿ ಮಧುಕರ ಎಂ ಶೆಟ್ಟಿ, ಉದ್ಯಮಿ ಶ್ರೀ ಪ್ರಕಾಶ್ ಶೆಟ್ಟಿ  ಸೇರಿದಂತೆ ಸಮಾಜದ  ಹಲವರು ಗಣ್ಯರು ಉಪಸ್ಥಿತರಿದ್ದರು... 
ಕಾರ್ಯಕ್ರಮದಲ್ಲಿ ಅನೇಕ ಸಾಂಸ್ಕೃತಿಕ  ಕಾರ್ಯಕ್ರಮಗಳು ಜರುಗಿದವು.
deepavali

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ