ಅಪಘಾತದಿಂದ ಮರ್ಮಗಕೆ ಪೆಟು 17ಲಕ್ಷ ಪರಿಹಾರ

ಬುಧವಾರ, 26 ಜನವರಿ 2022 (15:53 IST)
ರಸ್ತೆ ಅಪಘಾತದಿಂದ ಮರ್ಮಾಂಗ ಶಾಶ್ವತ ಊನಗೊಂಡಿದ್ದ ಯುವಕನಿಗೆ ಹೈಕೋರ್ಟ್ 17.66 ಲಕ್ಷ ರೂ. ಪರಿಹಾರ ನಿಗದಿಪಡಿಸಿದೆ. ರಾಣೆಬೆನ್ನೂರಿನಲ್ಲಿ 11 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಬಸವರಾಜು ಎಂಬ ವ್ಯಕ್ತಿಯ ಮರ್ಮಾಂಗ ಶಾಶ್ವತ ಊನಗೊಂಡಿತ್ತು, ಹೀಗಾಗಿ ಅವರು ಸಲ್ಲಿಸಿದ್ದ ಮೇಲ್ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಎಸ್ .ಪಂಡಿತ್ ಮತ್ತು ನ್ಯಾ. ಎ.ಆರ್ ಹೆಗಡೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಕೇವಲ 50 ಸಾವಿರ ರೂ. ಪರಿಹಾರ ನಿಗಧಿಪಡಿಸಿ, ಎಲ್ಲ ಸೇರಿಸಿ 3.73 ಲಕ್ಷ ರೂ. ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶ ನೀಡಿತ್ತು. ಇದೀಗ ಹೈಕೋರ್ಟ್ ಪರಿಹಾರದ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದು, ಪರಿಹಾರದ ಮೊತ್ತ ಏರಿಕೆ ಮಾಡಿ ಒಟ್ಟು 17.68 ಲಕ್ಷ ರೂ.ಗಳನ್ನು ನೀಡಲು ವಿಮಾ ಕಂಪನಿಗೆ ಆದೇಶಿಸಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ