ಜಮೀರ್ ಅಹ್ಮದ್‌ ವಿರುದ್ಧ ಕ್ರಮ ಫಿಕ್ಸಾ, ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್ ಹೇಳಿಕೆ

Sampriya

ಮಂಗಳವಾರ, 14 ಏಪ್ರಿಲ್ 2026 (18:23 IST)
ಬೆಂಗಳೂರು: ಪಕ್ಷಕ್ಕೆ ಶಿಸ್ತು ತುಂಬಾನೇ ಮುಖ್ಯವಾಗಿದ್ದು, ಆದರೆ ಜಮೀರ್ ಅಹ್ಮದ್‌  ಮಾತ್ರ ಶಿಸ್ತನ್ನು ಪಾಲನೆ ಮಾಡಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದರು.  

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷಕ್ಕೂ ಶಿಸ್ತು ತುಂಬಾನೇ ಮುಖ್ಯವಾಗಿದ್ದು, ಎಲ್ಲರನ್ನು ವಿಶ್ವಾಸಕ್ಕೆ ಪಡೆದೆ ಅಭ್ಯರ್ಥಿಯನ್ನಾ ಆಯ್ಕೆ ಮಾಡಿದ್ದೇವೆ ಎಂದರು. 

ನಂತರ ನಾವು ಎಲ್ಲಾ ನಾಯಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದೆವು. ನಮ್ಮ ನಾಯಕರ ವರದಿಗಳ ಆಧಾರದ ಮೇಲೆ, ತಮ್ಮದೇ ಆದ ವಿವಿಧ ಮೂಲಗಳಿಂದ ಮಾಹಿತಿ ಪಡೆದು, ಪಕ್ಷದ ಹಿತದೃಷ್ಟಿಯಿಂದ ನಜೀರ್ ಅಹ್ಮದ್ ವಿಚಾರದಲ್ಲಿ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಂಡಿರುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ಜಮೀರ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೇ ಎಂದು ಕೇಳಿದಾಗ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಇಂದು ರಾತ್ರಿ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದು, ಬುಧವಾರ ಚುನಾವಣಾ ಪ್ರಚಾರ ಕಾರ್ಯಕ್ರಮವಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ