ಚುನಾವಣೆ ಪ್ರಚಾರದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ

ಸೋಮವಾರ, 30 ಏಪ್ರಿಲ್ 2018 (13:06 IST)
ಬಾಗೇಪಲ್ಲಿ: ಬಾಗೇಪಲ್ಲಿ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ ಅವರ ಪ್ರಚಾರ ಕಾರ್ಯಕ್ರಮದಲ್ಲಿ ತೃತೀಯ ಲಿಂಗೀಯರಿಂದ ಡಾನ್ಸ್ ಮಾಡಿಸಲಾಗಿದೆ. 
ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗೇಪಲ್ಲಿ ವಿಧಾನ ಸಭೆ ವ್ಯಾಪ್ತಿಯ ವರ್ಲಕೊಂಡ ಗ್ರಾಮದಲ್ಲಿ ತೃತೀಯ ಲಿಂಗೀಯರಿಂದ ನಡು ರಸ್ತೆಯಲ್ಲಿ ಭರ್ಜರಿ ನೃತ್ಯ ನಡೆದಿದೆ. 
 
ಗ್ರಾಮಸ್ಥರು ತೃತೀಯ ಲಿಂಗೀಯ ಮಹಿಳೆಯರ ಮೈ ಮುಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲವನ್ನುಂಟು ಮಾಡಿದೆ. 
 
ವರ‌್ಲಕೊಂಡ ಗ್ರಾಮಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಚಾರಕ್ಕೆ ಬರುವ ಮುನ್ನವೇ  ಸಾರ್ವಜನಿಕರನ್ನು ಹಿಡಿದಿಡುವ ಉದ್ದೇಶದಿಂದ ಸುಮಾರು 2೦ ಜನ ತೃತೀಯ ಲಿಂಗಿಗಳಿಂದ (ಲಿಂಗತ್ವ ಅಲ್ಪಸಂಖ್ಯಾತರು) ನಡು ರಸ್ತೆಯಲ್ಲಿಯೇ ನೃತ್ಯ ಮಾಡಿಸಲಾಗಿದೆ. 
 
ಈ ವೇಳೆ ಗ್ರಾಮಾಸ್ಥರು ಅವರ ಎದೆ ಭಾಗವನ್ನು ಮುಟ್ಟಿ ಅಶ್ಲೀಲ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ವಿರೋಧಿಸುವ ಗೋಜಿಗೂ ಮುಖಂಡರು  ಹೋಗದಿರುವುದು ವಿರ್ಪಯಾಸ. 
 
ಅಶ್ಲೀಲ ನೃತ್ಯ, ಕೆಲವರ ಅಸಭ್ಯ ವರ್ತನೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಂಜೆ ವೇಳೆಯಲ್ಲಿ ನಡು ರಸ್ತೆಯಲ್ಲಿ ಈ ರೀತಿ ಆಮಿಷಗಳನ್ನು ನೀಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಗ್ಗೆ ಪ್ರಜ್ಞಾವಂತರಿಂದ ಆಕ್ರೋಶ ವ್ಯಕ್ತವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ