ವಾರ್ಷಿಕ ಅಮರನಾಥ ಯಾತ್ರೆಗೆ ಶುರುವಾಗಿದೆ ಮುಂಗಡ ನೋಂದಣಿ, ಜೂನ್ 29ರಿಂದ ಯಾತ್ರೆ ಶುರು
ಮುಂಗಡ ನೋಂದಣಿ ಇಂದು ಜಮ್ಮುವಿನ ಬ್ಯಾಂಕ್ ಶಾಖೆಗಳಲ್ಲಿ ಆರಂಭವಾಗಿದೆ. ದೇಶಾದ್ಯಂತ ಪಿಎನ್‌ಬಿಯ (ಪಂಜಾಬ್ ನ್ಯಾಷನಲ್ ಬ್ಯಾಂಕ್) 540 ಶಾಖೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಎಸ್‌ಎಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯಾತ್ರೆಗೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 75 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಆರು ವಾರ ತುಂಬಿದ ಗರ್ಭಿಣಿಯರು ನೋಂದಣಿ ಮಾಡಿಕೊಳ್ಳುವಂತಿಲ್ಲ ಎಂದು ಬೋರ್ಡ್ ಪ್ರಕಟಣೆ ತಿಳಿಸಿದೆ.