ಮುಂದುವರಿದ ಮುಂಬೈ ಕಾಟ : 121 ಕೊರೊನಾ ಕೇಸ್
ರಾಜ್ಯದ ಈ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸೋಂಕು ಪತ್ತೆಯಾಗುವುದು ಮುಂದುವರಿದಿದೆ.
ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಗಳಿಂದ ಜಿಲ್ಲೆಗೆ ಬಂದವರು ಹಾಗೂ ಸೋಂಕಿತರ ಸಂಪರ್ಕಕ್ಕೆ ಬಂದವರಲ್ಲಿ ವೈರಸ್ ಕಾಣಿಸಿಕೊಂಡಿದೆ.
ಇನ್ನು ಕಂಟೈನ್ ಮೆಂಟ್ ಝೋನ್ ನಲ್ಲಿದ್ದ ಜನರಲ್ಲೂ ಡೆಡ್ಲಿ ವೈರಸ್ ಇರುವುದು ದೃಢವಾಗಿದೆ. ಈ ಮೂಲಕ ಕಲಬುರಗಿಯಲ್ಲಿ ಈವರೆಗೆ 2313 ಕೊರೊನಾ ಕೇಸ್ ಗಳು ಪತ್ತೆಯಾದಂತೆ ಆಗಿವೆ. ಓರ್ವ ಸಾವನ್ನಪ್ಪಿದ್ದಾನೆ. 37 ಕ್ಕೆ ಸಾವನ್ನಪ್ಪಿದವರ ಸಂಖ್ಯೆ ತಲುಪಿದೆ.
13 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ 757 ಸಕ್ರಿಯ ಕೇಸ್ ಗಳಿಗೆ ಚಿಕಿತ್ಸೆ ಮುಂದುವರಿದಿದೆ.