ಡಿವೋರ್ಸ್ ಪಡೆದ ದಂಪತಿ 52 ವರ್ಷ ನಂತರ ಮತ್ತೆ ಒಂದಾದರು!

ಮಂಗಳವಾರ, 28 ಜೂನ್ 2022 (14:32 IST)

ವಿಚ್ಛೇದನ ಪಡೆದು ದೂರ ಆಗಿದ್ದ ದಂಪತಿ ಇಳಿ ವಯಸ್ಸಿನಲ್ಲಿ ಅಂದರೆ ಸುಮಾರು 52 ವರ್ಷಗಳ ನಂತರ ಮತ್ತೆ ಒಂದಾದ ಅಪರೂಪದ ಘಟನೆ ಧಾರವಾಡದಲ್ಲಿ ನಡೆದಿದೆ.

85 ವರ್ಷದ ಬಸಪ್ಪ ಮತ್ತು 80 ವರ್ಷದ ಕಲ್ಲವ್ವ ಲೋಕ ಅದಾಲತ್‌ ಮೂಲಕ ಮತ್ತೆ ಒಂದಾಗಿದ್ದಾರೆ.

ಕಲ್ಲವ್ವಗೆ 52 ವರ್ಷಗಳಿಂದ ಜೀವನಾಂಶ ನೀಡುತ್ತಾ ಬಂದಿದ್ದ ಬಸಪ್ಪ ಇತ್ತೀಚೆಗೆ ಜೀವನಾಂಶ ಕಳುಹಿಸುವುದನ್ನು ನಿಲ್ಲಿಸಿದ್ದರು. ಇದರಿಂದ ಕಲ್ಲವ್ವ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವೃದ್ಧ ದಂಪತಿಯ ಸಮಸ್ಯೆಯನ್ನು ಆಲಿಸಿದ ನ್ಯಾಯಾಧೀಶರು ರಾಜೀ ಸಂಧಾನ ಮಾಡುವ ಮೂಲಕ ಇಬ್ಬರನ್ನು ಒಂದುಗೂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ