ಕೋವಿಡ್ ಬಳಿಕ ಮತ್ತೊಂದು ವೈರಸ್ ಹಾವಳಿ ಶುರು

ಭಾನುವಾರ, 5 ಮಾರ್ಚ್ 2023 (18:31 IST)
ಬರೋಬ್ಬರಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಕೊರೋನಾ ವೈರಸ್ ಜಗತ್ತನ್ನೇ ಕಂಗೆಡಿಸಿತ್ತು. ಈಗ ಮತ್ತೊಂದು ಹೊಸ ವೈರಸ್ ಜನರಲ್ಲಿ ಭೀತಿ ಹುಟ್ಟಿಸುತ್ತಿದೆ. ದೇಶದಾದ್ಯಂತ ಈಗ ದಿಟ್ಟು  ಕೋವಿಡ್ ಲಕ್ಷಣಗಳನ್ನೇ ಹೋಲುವ  ವೈರಸ್ ಸೋಂಕು ಹರಡುತ್ತಿದೆ. ಜನರಲ್ಲಿ ಆತಂಕ ಶುರು ಮಾಡಿದೆ.ದೇಶಾದ್ಯಂತ ಕಳೆದ ಮೂರು ತಿಂಗಳಿನಿಂದ ಜ್ವರ, ಶೀತ, ಕೆಮ್ಮಿನ ಸಮಸ್ಯೆ ವ್ಯಾಪಕವಾಗಿದೆ. ಇದೀಗ  ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಎಚ್3ಎನ್2 ವೈರಸ್ನ ಉಪತಳಿ ಪ್ರಮುಖ ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ  ತಜ್ಞರು ತಿಳಿಸಿದ್ದಾರೆ. 

ಭಾರತದಲ್ಲಿ  ಕಳೆದ  3 ತಿಂಗಳಿನಿಂದ  ಜ್ವರ, ಶೀತ, ಕೆಮ್ಮಿ ಹೆಚ್ಚಳ 
ಅವೈಜ್ಞಾನಿಕ ಆಂಟಿಬಯೋಟಿಕ್ ಮಾತ್ರೆಗಳನ್ನು ಬಳಸದಂತೆ  ICMR ಎಚ್ಚರಿಕೆ
ದೀರ್ಘ ಕಾಲದ ಕೆಮ್ಮು, ಜ್ವರದ ಬಗ್ಗೆ ಅಸಡ್ಡೆ ತೋರದಂತೆ ಎಚ್ಚರಿಕೆ
ಶೀತ, ಕೆಮ್ಮು, ಜ್ವರ ಪ್ರಕರಣಗಳಿಂದ ಅಸ್ಪತ್ರೆಗೆ ಬರ್ತಿರುವ ರೋಗಿಗಳು
ವೈರಸ್ ಇದ್ದಾರೆ ಕೆಮ್ಮು 2-3 ವಾರಗಳ ಕಾಲ ಮುಂದುವರೆಯುವುದು…!
 
 
ಇನ್ನು H3N2 ವೈರಸ್  ಲಕ್ಷಣಗಳನ್ನು ನೋಡುವುದಾದರೆ ಕೆಮ್ಮು ,ವಾಕರಿಕೆ,ವಾಂತಿ,ಗಂಟಲು ನೋವು,ಸ್ನಾಯುಸೆಳೆತ, ಅತಿಸಾರ , ಶೀತ, ಜ್ವರ ಲಕ್ಷಣಗಳು  ಕಾಣಿಸಿಕೊಳ್ಳುತ್ತವೆ . ಇನ್ನು ಯಾವ ರೀತಿ ನಾವು ಇದರ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಬಹುದೆಂದರೆ ಆಗಾಗ ಸೋಪು ನೀರು ಬಳಸಿ ಕೈಗಳನ್ನು ತೊಳೆಯಿರಿ.ಮಾಸ್ಕ್ ಧರಿಸಿ, ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಅನಗತ್ಯ ಓಡಾಟವನ್ನು ತಪ್ಪಿಸಿ.ಪದೇ ಪದೇ ಮೂಗು ಬಾಯಿ ಮುಟ್ಟಬೇಡಿ. ಹೆಚ್ಚು ನೀರು ಕುಡಿಯಿರಿ..
ಜ್ವರ ಅಥವಾ ಮೈಕೈ ನೋವು ಇದ್ದರೆ ಪ್ಯಾರಾಸಿಟಮಾಲ್ ಸೇವಿಸಿ.ಈ ನಡುವೆ ಹವಾಮಾನ ಬದಲಾವಣೆ ವಾಯುಮಾಲಿನ್ಯ ಮೊದಲಾದ ಕಾರಣಗಳಿಂದ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ 15 ವರ್ಷದಿಂದ ಕೆಳಗಿನ ಮತ್ತು 50 ವರ್ಷ ಮೇಲ್ಪಟ್ಟವರಲ್ಲಿ ಇದು ಶ್ವಾಸಕೋಶದ  ಸೋಂಕಿನ ರೂಪದಲ್ಲಿ ಹರಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.  ಜ್ವರಕ್ಕೆ ಹಲವೆಡೆ ಜನರು ನೇರವಾಗಿ ಅಜಿತ್ರೋಮೈಸಿನ್, ಅಮೋಕ್ಸಿಕ್ಲಾವ್ನಂಥ ಆ್ಯಂಟಿ ಬಯೋಟಿಕ್ಸ್ಗಳನ್ನು ಪಡೆದುಕೊಳ್ಳಬೇಕು ವೈಧ್ಯರು ಹೇಳುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ನಗರದ  ಜನರು  ಜ್ವರ, ಶೀತಾ, ಕೆಮ್ಮು ಎಂದು ಆಸ್ಪತ್ರೆ ದಾಖಲು ಹಾಗುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ರೂ ಇನು ಯಾರು  H3N2 ವೈರಸ್  ರೋಗಿಗಳು ದಾಖಲು ಆಗಿಲ್ಲ. ಆದ್ರೆ  H3N2 ಬರುವ ಸಧ್ಯತೆ ಇದೆ. ಜ್ವರ, ಶೀತ, ಕೆಮ್ಮು, ವಾಂತಿ,ಗಂಟಲು ನೋವು, ಕಂಡು ಬಂದರೆ ಯಾರು ನಿರ್ಲಕ್ಷ್ಯ ಮಾಡಬೇಡಿ 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ