ಗಣೇಶ ಹಬ್ಬ ಮಾತ್ರವಲ್ಲ ಈದ್ ಮಿಲಾದ್ ಗೂ ಡಿಜೆಗೆ ನಿಷೇಧ: ರಾಜ್ಯ ಸರ್ಕಾರ ಹೊರಡಿಸಿದ ನಿಯಮಗಳೇನು

Krishnaveni K

ಶುಕ್ರವಾರ, 13 ಸೆಪ್ಟಂಬರ್ 2024 (14:05 IST)
ಬೆಂಗಳೂರು: ಮೊನ್ನೆಯಷ್ಟೇ ಗಣೇಶ ಹಬ್ಬಕ್ಕೆ ಡಿಜೆ, ಪಟಾಕಿಗೆ ನಿಷೇಧ ಹೇರಿ ವಿವಾದಕ್ಕೊಳಗಾಗಿದ್ದ ರಾಜ್ಯ ಸರ್ಕಾರ ಈಗ ಮುಸಲ್ಮಾನರ ಈದ್ ಮಿಲಾದ್ ಹಬ್ಬಕ್ಕೂ ಕೆಲವು ಷರತ್ತು ವಿಧಿಸಿದೆ.

ಗಣೇಶ ಹಬ್ಬದಂತೇ ಈದ್ ಮಿಲಾದ್ ಮೆರವಣಿಗೆಯಲ್ಲೂ ಡಿಜೆ ಸೌಂಡ್ ಹಾಕುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಗಳು ನಡೆಯುವ ಸಾಧ್ಯತೆ ಹಿನ್ನಲೆಯಲ್ಲಿ ಹರಿತವಾದ ಆಯುಧಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಆದೇಶ ಹೊರಡಿಸಿದೆ.

ಗಣೇಶ ಹಬ್ಬ ಆಚರಣೆಗೆ ಹಲವು ಷರತ್ತು ವಿಧಿಸಿದ್ದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮುಂದೆ ಈದ್ ಮಿಲಾದ್ ಗೂ ಇದೇ ರೀತಿ ಷರತ್ತು ಹಾಕುತ್ತೀರಾ ಎಂದು ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿತ್ತು. ಇದೀಗ ಈದ್ ಮಿಲಾದ್ ಗೂ ಕೆಲವೊಂದು ನಿಯಮಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ರಾತ್ರಿ ಅವಧಿ ಮೀರಿ ಸೌಂಡ್ ಮಾಡುವಂತಿಲ್ಲ, ಡಿಜೆ ಸೌಂಡ್ ಹಾಕಿ ಅಕ್ಕಪಕ್ಕದವರಿಗೆ ತೊಂದರೆ ಮಾಡುವಂತಿಲ್ಲ ಇತ್ಯಾದಿ ಷರತ್ತು ವಿಧಿಸಿದೆ. ಆದರೆ ಇದು ಎಷ್ಟರಮಟ್ಟಿಗೆ ಪಾಲನೆಯಾಗುತ್ತದೆ ನೋಡಬೇಕಿದೆ. ಯಾಕೆಂದರೆ ಗಣೇಶ ಹಬ್ಬಕ್ಕೂ ಡಿಜೆ ಹಾಕುವಂತಿಲ್ಲ ಎಂದರೂ ಯಥಾವತ್ತಾಗಿ ಡಿಜೆ ಹಾಕಿ ಹಬ್ಬ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಗಣೇಶ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ನಡೆದ ಕೋಮುಗಲಭೆಯ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಈದ್ ಮಿಲಾದ್ ಗೂ ಕಠಿಣ ನಿಯಮ ಜಾರಿಗೆ ತರಲು ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ