Electricity price hike: ಹಾಲಿನ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಶಾಕ್ ಕೊಟ್ಟ ಸರ್ಕಾರ

Krishnaveni K

ಗುರುವಾರ, 27 ಮಾರ್ಚ್ 2025 (17:37 IST)
ಬೆಂಗಳೂರು: ರಾಜ್ಯದ ಜನರಿಗೆ ಇಂದು ಡಬಲ್ ಬೆಲೆ ಏರಿಕೆ ಶಾಕ್. ಮೊದಲು ನಂದಿನಿ ಹಾಲು ದರ ಏರಿಕೆ ಮಾಡಿದ ಸರ್ಕಾರ ಇದರ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಬಗ್ಗೆ ಅಧಿಕೃತ ಘೋಷಣೆ ಮಾಡಿ ಶಾಕ್ ಕೊಟ್ಟಿದೆ.
 

ಈಗಾಗಲೇ ವಿದ್ಯುತ್ ದರ ಪ್ರತೀ ಯೂನಿಟ್ ಗೆ 36 ಪೈಸೆಯಂತೆ ಹೆಚ್ಚಳ ಮಾಡಲಾಗುವುದು ಎಂದು ಘೋಷಣೆಯಾಗಿತ್ತು. ಆದರೆ ಅದು ಅಧಿಕೃತ ಘೋಷಣೆಯಾಗಿರಲಿಲ್ಲ. ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಈಗಾಗಲೇ ಉಚಿತ ವಿದ್ಯುತ್ ಯೋಜನೆ ಪಡೆಯುತ್ತಿರುವವರಿಗೆ ಈ ದರ ಅನ್ವಯವಾಗುವುದಿಲ್ಲ. ಆದರೆ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಹೊಸ ವಿದ್ಯುತ್ ದರ ಅನ್ವಯವಾಗಲಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಗೆ ಬರಲಿದೆ.

ಇಂದು ಇದಕ್ಕೂ ಮುನ್ನ ಸರ್ಕಾರ ನಂದಿನಿ ಹಾಲಿನ ದರ ಏರಿಕೆ ಶಾಕ್ ಕೊಟ್ಟಿತ್ತು. ನಂದಿನಿ ಹಾಲಿನ ದರವನ್ನು ಪ್ರತೀ ಲೀಟರ್ ಗೆ 3 ರೂ.ಗಳಷ್ಟು ಏರಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿದ್ಯುತ್ ಶಾಕ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ