ಮತ್ತೆ ಬೆಂಗಳೂರಿಗೆ ಬರಲಿದೆ ಡಬಲ್ ಡೆಕ್ಕರ್ ಬಸ್

ಬುಧವಾರ, 24 ಮೇ 2017 (10:37 IST)
ಬೆಂಗಳೂರು: 1990 ರ ಕಾಲದಲ್ಲಿ ಬೆಂಗಳೂರು ನೋಡಿದವರಾಗಿದ್ದರೆ, ಇಲ್ಲಿ ಓಡಾಡುತ್ತಿದ್ದ ಡಬಲ್ ಡೆಕ್ಕರ್ ಬಸ್ ಗಳ ನೆನಪಿರಬಹುದು. ಅದು ಮತ್ತೆ ರಾಜಧಾನಿಯ ರಸ್ತೆಗಳಲ್ಲಿ ಓಡಾಡಲಿದೆಯಂತೆ!


ಹೌದು. ಡಬಲ್ ಡೆಕ್ಕರ್ ಬಸ್ ನ ಮೇಲಂತಸ್ತಿನ ಸೀಟ್ ನಲ್ಲಿ ಕುಳಿತುಕೊಳ್ಳಲು ಅದೆಷ್ಟು ಜನ ಹಾತೊರೆಯುತ್ತಿದ್ದರು. ಮೇಲೆ ಕುಳಿತು ಜಮ್ಮೆಂದು ಪ್ರಯಾಣ ಮಾಡುವ ಕನಸು ಈ ವರ್ಷಾಂತ್ಯಕ್ಕೆ ನನಸಾಗುವ ನಿರೀಕ್ಷೆಯಿದೆ.

ಈ ವರ್ಷಾಂತ್ಯದ ವೇಳೆಗೆ ಐದು ಅಥವಾ ಆರು ಡಬಲ್ ಡೆಕ್ಕರ್ ಬಸ್ ಗಳನ್ನು ಖರೀದಿಸುವ ಇರಾದೆ ಬಿಎಂಟಿಸಿಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 90 ರ ದಶಕದಲ್ಲಿ ಜನಪ್ರಿಯವಾಗಿದ್ದ ಡಬಲ್ ಡೆಕ್ಕರ್ ಬಸ್ ಗಳು 1980 ರಲ್ಲಿ ಗಾಂಧಿ ಬಜಾರ್ ಬಳಿ ಭಾರೀ ಅಪಘಾತಕ್ಕೀಡಾದ ಹಿನ್ನಲೆಯಲ್ಲಿ ಬಿಎಂಟಿಸಿ ಇಂತಹ ಬಸ್ ಗಳನ್ನು ಒಂದೊಂದಾಗಿ ಹಿಂಪಡೆದಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ